ಎಲ್ಲರಿಗೂ ನಮಸ್ಕಾರ, ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬಂದಿಲ್ಲವೇ..? ಅಕ್ಕಿ ಹಣ (Anna Bhagya Amount) ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಅನ್ನಭಾಗ್ಯ ಯೋಜನೆಯ ಹಣ ಯಾವಾಗ ನಿಮ್ಮ ಖಾತೆಗೆ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು 5kg ಅಕ್ಕಿಯನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಹಾಗೂ ಉಳಿದ ಐದು ಕೆಜಿ ಅಕ್ಕಿ ಬದಲಿಗೆ ಕೆಜಿ ಗೆ 34 ರೂ. ಅಂತೆ ಒಬ್ಬ ಸದಸ್ಯರಿಗೆ 170 ರೂಪಾಯಿಗಳನ್ನು DBT ಮೂಲಕ ಹಣವನ್ನು ಸಂದಾಯ ಮಾಡುತ್ತಾರೆ.
Anna Bhagya Amount Date:
ಹೌದು ಅನ್ನಭಾಗ್ಯ ಯೋಜನೆಯ ಹಣವು ಕಳೆದ ಎರಡು, ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಬಂದಿಲ್ಲ. ಯಾವಾಗ ಅಕ್ಕಿ ಹಣ ಬರುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳ ಅಂತ್ಯದೊಳಗೆ ಅಕ್ಕಿ ಹಣ ಸಂದಾಯವಾಗುವಂತೆ ಕ್ರಮ ತೆಗೆದುಕೊಳ್ಳಲು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪನವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಪಿಎಲ್, ಬಿಪಿಎಲ್ ಕಾರ್ಡ್‌ಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.
ಪಡಿತರದಾರರಿಗೆ ನೀಡುತ್ತಿರುವ ಅಕ್ಕಿ, ರಾಗಿ, ಜೋಳ ಗುಣಮಟ್ಟದಿಂದ ಇರಬೇಕು. ಗೋದಾಮೀನಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ವಿಲೇವಾರಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಖಚಿತಪಡಿಸಿಕೊಂಡು ನಂತರ ಸರಬರಾಜು ಮಾಡಬೇಕು ಎಂದ ಹೇಳಿದ್ದಾರೆ.
ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂದು DBT Status ಚೆಕ್ ಮೂಲಕ ಪರೀಶಿಲಿಸಿಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ:
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ
3 ಲಕ್ಷ ರೂ. ಸಬ್ಸಿಡಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ
ಗೃಹಲಕ್ಷ್ಮಿ DBT Status Check ಮಾಡಿ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ