ಎಲ್ಲರಿಗೂ ನಮಸ್ಕಾರ, ಹಲವಾರು ಸಂಸ್ಥೆ ಅಥವಾ ಫೌಂಡೇಶನ್ ಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸುತ್ತವೆ. ಅಪ್ಪಿನ್ವೆಂಟಿವ್ ಸ್ಕಾಲರ್‌ಶಿಪ್ ಗೆ (Appinventiv Edu Boost Scholarship) ಹೇಗೆ ಅರ್ಜಿ ಸಲ್ಲಿಸಬೇಕು..? ಅಗತ್ಯ ದಾಖಲೆಗಳೇನು..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
Appinventiv ಫೌಂಡೇಶನ್ ವತಿಯಿಂದ ಅಪ್ಪಿನ್ವೆಂಟಿವ್ ‘ಎಡು ಬೂಸ್ಟ್’ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪದವಿಪೂರ್ವ ತಂತ್ರಜ್ಞಾನ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಕಾರ್ಯಕ್ರಮ ಹೊಂದಿದೆ.
ಮೊದಲ ವರ್ಷದ B.Tech ಹಾಗೂ BCA ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವೆಚ್ಚಗಳಿಗೆ ಧನ ಸಹಾಯ ನೀಡಲು ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಒಂದು ಬಾರಿ 30,000 ರೂ. ಸ್ಕಾಲರ್ಶಿಪ್ ದೊರೆಯಲಿದೆ.
Appinventiv Edu Boost Scholarship ಅರ್ಹತೆಗಳು:
- ಪ್ರಸ್ತುತ B.Tech ಹಾಗೂ BCA ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಹರು.
- ದ್ವಿತೀಯ ಪಿಯುಸಿ ಅಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
- Buddy4Study ಮತ್ತು Appinventiv ಉದ್ಯೋಗಿಗಳ ಮಕ್ಕಳು ಅನರ್ಹರು.
ಪ್ರಯೋಜನಗಳು:
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಒಂದು ಬಾರಿ 30,000 ರೂ. ಸ್ಕಾಲರ್ಶಿಪ್ ದೊರೆಯಲಿದೆ. ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದು.
ಅಗತ್ಯ ದಾಖಲೆಗಳು:
- ಪಾಸ್‌ಪೋರ್ಟ್ ಗಾತ್ರದ ಪೋಟೋ
- ಪ್ರವೇಶ ಪತ್ರ
- 12th ಅಂಕಪಟ್ಟಿ
- Payment receipts of educational expenses.
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 03-10-2024
ಪ್ರಮುಖ ಲಿಂಕ್‌ಗಳು:
Appinventiv Edu Boost Scholarship Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ: