ಎಲ್ಲರಿಗೂ ನಮಸ್ಕಾರ, ನೀವು ಕೂಡ ಬೆಳೆ ವಿಮೆ ಅರ್ಜಿ ಸಲ್ಲಿಸಬೇಕೆ..? ಬೆಳೆ ವಿಮೆಗೆ (Crop Insurance) ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ, ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟ ಎಂದುರಿಸುವಂತಾಗುತ್ತದೆ. ರೈತರು ಬೆಳೆದ ಬೆಳೆಗಳು ಸರಿಯಾಗಿ ಬರದೆ ನಷ್ಟ ಅನುಭವಿಸುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆಯ ಹಣ ರೈತರಿಗೆ ನೇರವಾಗುತ್ತದೆ.
Crop Insurance Karnataka:
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಯ ಅಡಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ ವಿಮಾ ಕಂತು ಕಟ್ಟಿದ ರೈತರಿಗೆ ಬೆಲೆ ಹಾನಿಯಾದಲ್ಲಿ ವಿಮಾ ಕಂಪನಿಗಳು ಪರಿಹಾರ ನೀಡುತ್ತವೆ.
ವಿಮಾ ಕಂತಿನ ಮೊತ್ತದಲ್ಲಿ ಬೆಲೆಗಳಿಗೆ ಅನುಗುಣವಾಗಿ ಇಂತಿಷ್ಟು ಶೇಕಡಾ ಮೊತ್ತವನ್ನು ರೈತರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪಾವತಿಸುತ್ತದೆ.
ಹೌದು ರೈತರಿಗೆ ಬೆಳೆ ವಿಮೆಯನ್ನು ಸರ್ಕಾರ ಮತ್ತು ವಿಮಾ ಕಂಪನಿಗಳು ನೀಡುತ್ತವೆ. ಕರ್ನಾಟಕದಲ್ಲಿ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನಿಮ್ಮ ಪ್ರದೇಶದಲ್ಲಿ ಯಾವ ಬೆಳೆಗಳಿಗೆ ಎಷ್ಟು ವಿಮೆ ನೀಡಲಾಗುತ್ತಿದೆ ಎಂದು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಿ.
ನಿಮ್ಮ ಪ್ರದೇಶದಲ್ಲಿ ಯಾವ ಬೆಳೆಗಳಿಗೆ ವಿಮೆ ನೀಡಲಾಗುತ್ತಿದೆ ಮತ್ತು ನೀವು ಎಷ್ಟು ಪ್ರೀಮಿಯಂ ಪಾವತಿಸಬೇಕು ಎಂಬುದನ್ನು ಪರಿಶೀಲಿಸಿಕೊಳ್ಳಿ. ಹಾಗೂ ಎಕರೆಗೆ ಎಷ್ಟು ಹಣವನ್ನು ಕಟ್ಟಬೇಕು ನೀವು ಕಟ್ಟಿರುವ ಇನ್ಸೂರೆನ್ಸ್ ಹಣಕ್ಕೆ ಎಷ್ಟು ವಾಪಸ್ ಬರುತ್ತದೆ ಎಂದು ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಬೆಳೆ ವಿಮೆ ಅರ್ಜಿ ಸಲ್ಲಿಸಲು ಬಯಸುವ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ CSC ಕೇಂದ್ರಗಳು, ಸೇವಾ ಸಿಂಧು ಕೇಂದ್ರಗಳು ಅಥವಾ ಗ್ರಾಮ ಒನ್ ಕರ್ನಾಟಕ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು.
Crop Insurance Karnataka ಪ್ರಮುಖ ಲಿಂಕ್‌ಗಳು:
Crop Insurence Premium Calculator: ಚೆಕ್ ಮಾಡಿ
Cut Off Dates: ಚೆಕ್ ಮಾಡಿ
ಬೆಳೆಗಳ ಪಟ್ಟಿ: ಚೆಕ್ ಮಾಡಿ
ಅಧಿಕೃತ ವೆಬ್‌ಸೈಟ್: samrakshane.karnataka.gov.in
ಇತರೆ ಮಾಹಿತಿಗಳನ್ನು ಓದಿ:
PM Kisan 17th Installment: ಪಿಎಂ ಕಿಸಾನ್ ಸಮ್ಮಾನ ನಿಧಿ 17 ನೇ ಕಂತಿನ ಹಣ ಬಿಡುಗಡೆ
ರೈತರಿಗೆ ಗುಡ್ ನ್ಯೂಸ್: ರೈತರ ಖಾತೆಗಳಿಗೆ 3,000 ರೂ. ಜಮಾ
ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ