ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರವು ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ (Free Gas Scheme) ಸಿಲಿಂಡರ್ಗಳನ್ನು ನೀಡುತ್ತಿದೆ ಯಾವುದು ಈ ಯೋಜನೆ ಯಾರು ಅರ್ಜಿ ಸಲ್ಲಿಸಬಹುದು. ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
ಬಡವರು ಮತ್ತು ಕಡಿಮೆ ಆದಾಯ ಹೊಂದಿರುವ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು 75 ಲಕ್ಷ ಉಚಿತ ಎಲ್ಪಿಜಿ ಗ್ಯಾಸ್ ಗಳನ್ನು ಮಹಿಳೆಯರಿಗೆ ನೀಡಲಾಗಿತ್ತು. ಈ ಯೋಜನೆಯನ್ನ ಕೇಂದ್ರ ಸರ್ಕಾರವು ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಿದೆ.
01-05-2016 ರಲ್ಲಿ ಉಜ್ವಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದಾರೆ. ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಅರ್ಹ ಮಹಿಳೆಯರಿಗೆ ಕೇಂದ್ರ ಸರ್ಕಾರವು ನೀಡುತ್ತಿದೆ.
ಈ ಯೋಜನೆಯ ಅಡಿಯಲ್ಲಿ 1 ಕೋಟಿಗೂ ಅಧಿಕ ಫಲಾನುಭವಿಗಳು ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದುಕೊಂಡಿದ್ದಾರೆ. ಸಬ್ಸಿಡಿಯೊಂದಿಗೆ ಪ್ರತಿ ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ (Free Gas Scheme) ಗಳನ್ನು ನೀಡಲಾಗುತ್ತಿದೆ. ಉಜ್ವಲ ಯೋಜನೆಯ (Ujjwala Yojana) 2ನೇ ಹಂತದ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ನಂತರ ಅರ್ಜಿ ಸಲ್ಲಿಸಬಹುದು.
Ujjwala Yojana 2.0 ಅರ್ಹತೆಗಳು:
- ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 2 ನೇ ಹಂತಕ್ಕೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- 18 ವರ್ಷ ಪೂರೈಸಿರಬೇಕು.
- ಗ್ರಾಮೀಣ ಪ್ರದೇಶದ ಅರ್ಜಿದಾರರ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ನಗರದ ಪ್ರದೇಶದ ಅರ್ಜಿದಾರರ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಅರ್ಜಿದಾರರ ಕುಟುಂಬದ ಇತರ ಸದಸ್ಯರು ಯೋಜನೆಯ ಪ್ರಯೋಜನವನ್ನ ಪಡೆಯಬಾರದು.
Free Gas Scheme ಅಗತ್ಯವಿರುವ ದಾಖಲೆಗಳು:
- ಆಧಾರ್ ಕಾರ್ಡ್
- ವಿಳಾಸ ಪುರಾವೆ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
ಇತರೆ ಮಾಹಿತಿಗಳನ್ನು ಓದಿ:
ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್ ಶುಲ್ಕ ಶೇ.27 ರವರೆಗೆ ಏರಿಕೆ
3 ಲಕ್ಷ ರೂ. ಸಬ್ಸಿಡಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ
ಗೃಹಲಕ್ಷ್ಮಿ DBT Status Check ಮಾಡಿ
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ