ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ 11 ನೇ ಕಂತಿನ ಹಣವು ಯಾವಾಗ ಸಂದಾಯವಾಗುತ್ತದೆ ಎಂದು ಕಾತುರದಿಂದ ಕಾಯುತ್ತಿರುವ ಮನೆ ಯಜಮಾನಿಯರಿಗೆ ಗುಡ್ ನ್ಯೂಸ್. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ (Gruha Lakshmi 11th Installment) ಪ್ರತೀ ತಿಂಗಳು 2,000 ರೂಪಾಯಿಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಹೌದು ರಾಜ್ಯದಲ್ಲಿ ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಈಗಾಗಲೇ 10 ಕಂತುಗಳ ಹಣವು ಬಿಡುಗಡೆ ಆಗಿದ್ದು, 11ನೇ ಕಂತಿನ ಹಣ ಬಿಡುಗಡೆಗಾಗಿ ಮಹಿಳೆಯರು ಕಾಯುತ್ತದ್ದಾರೆ. ಈ ಯೋಜನೆಯ ಅಡಿಯಲ್ಲಿ 10 ಕಂತಿನ 20,000 ರೂ. ಗಳು ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ.
Gruha Lakshmi 11th Installment:
ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಇನ್ನೂ ಸಾಕಷ್ಟು ಜನರು ತಮ್ಮ ಬ್ಯಾಂಕ್ ಖಾತೆಗೆ ಆಧಾರ ಸೀಡಿಂಗ್ (Aadhar seeding) ಮಾಡಿಸಿಕೊಂಡಿಲ್ಲ. ಆಧಾರ್ ಜೊತೆ ರೇಷನ್ ಕಾರ್ಡ್ ಲಿಂಕ್ ಆಗದೇ ಇರುವುದು, ಹೆಸರಿನ ದೋಷ ಸೇರಿದಂತೆ ತಾಂತ್ರಿಕ ಕಾರಣಗಳಿಂದಾಗಿ ಗೃಹಲಕ್ಷ್ಮೀ ಯೋಜನೆಯ ಹಣವು ನೀಮಗೆ ಬರುತ್ತಿಲ್ಲ.
ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದರು ಯಾರಿಗೆ ಈ ಯೋಜನೆಯ ಹಣ ನಂದಿರುವುದಿಲ್ಲ ಅಂತವರು ಈ ಮೇಲಿನ ಎಲ್ಲಾ ಸಮಸ್ಯಗಳನ್ನು ನೀವಾರಿಸಿಕೊಂಡ ನಂತರ ಗೃಹಲಕ್ಷ್ಮಿ ಯೋಜನೆಯ ಹಣವು ನೀಮಗೆ ಬರುತ್ತದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಆಗುವುದು ವಿಳಂಭವಾಗಿತ್ತು. ಸರ್ಕಾರವು ಮೊದಲಿಗೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ನಂತರ 11 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆ 11 ನೇ ಕಂತಿನ ಹಣವು ಇನ್ನೂ ಎರಡು ದಿನಗಳಲ್ಲಿ ವರ್ಗಾವಣೆ ಆಗಲಿದೆ. ಜೂನ್ 20 ರಂದು ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುವ ಸಾಧ್ಯತೆ ಇದೆ.
ಗೃಹಲಕ್ಷ್ಮೀ ಯೋಜನೆ 11 ನೇ ಕಂತಿನ (Gruha Lakshmi 11th Installment Money) ಹಣವು ನಿಮ್ಮ ಖಾತೆಗೆ ಬಂದಿದೆಯಾ ಎಂಬುದನ್ನು ಗೃಹಲಕ್ಷ್ಮೀ DBT Status Check ಮೂಲಕ ಚೆಕ್ ಮಾಡಿಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ:
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ