Gruhalakshmi Scheme: ಗೃಹಲಕ್ಷ್ಮೀ ಯೋಜನೆಯ ಪೇಂಡಿಂಗ್ 4,000 ಹಣ ಬಿಡುಗಡೆ: ಸಿಎಂ ಸಿದ್ಧರಾಮಯ್ಯ ಅಧಿಕೃತ ಹೇಳಿಕೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ..? ಈ ಯೋಜನೆ (Gruhalakshmi Scheme) ಯ ಹಣವು ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ಗುಡ್‌ ನ್ಯೂಸ್.‌ ಹಣ ಬಿಡುಗಡೆ ಕುರಿತು ಖುದ್ದು ಸಿಎಂ ಸಿದ್ಧರಾಮಯ್ಯನವರು ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಜೂನ್ ಹಾಗೂ ಜುಲೈ ತಿಂಗಳಿನ ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಯಾಕೆ ಜಮಾ ಆಗುತ್ತಿಲ್ಲ ಎಂದು ಮನೆ ಯಜಮಾನಿಯರು ಕಾಯುತ್ತಿದ್ದೀರಾ. ಎರಡು ತಿಂಗಳ ಹಣವು ಯಾವಾಗ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ..? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

Gruhalakshmi Scheme Pending Money:

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ರೂ. ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇದುವರೆಗೂ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯ 10 ಕಂತುಗಳ 20 ಸಾವಿರ ರೂ. ಹಣವು ಅರ್ಹ ಫಲಾನುಭವಿಗಳಿಗೆ ಖಾತೆಗೆ ಜಮಾ ಆಗಿದ್ದು, 11 ಮತ್ತು 12 ನೇ ಕಂತಿನ ಹಣವು ಜಮಾ ಆಗಿಲ್ಲ. ಕೋಟಿಗೂ ಅಧಿಕ ಮನೆ ಯಜಮಾನಿಯರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಮಡಿಕೇರಿಯಲ್ಲಿ ನೆರೆಹಾನಿಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು “ಮೇ ತಿಂಗಳವರೆಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಜಮಾನಿಯರ ಖಾತೆಗೆ ಸಂದಾಯ ಮಾಡಲಾಗಿದೆ. ಜೂನ್, ಜುಲೈ ತಿಂಗಳ ಎರಡು ತಿಂಗಳುಗಳ ಹಣ ಪಾವತಿ ಮಾಡುವುದು ಬಾಕಿ ಇದ್ದು, ಜೂನ್‌ ತಿಂಗಳ ಹಣ ಬಿಡುಗಡೆ ಮಾಡಲು ತಿಳಿಸಲಾಗಿದೆ” ಎಂದರು.

ಇನ್ನೇನು ಕೆಲವೇ ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆ ಇದ್ದು, ನಿಮ್ಮ ಖಾತೆಗೆ ಜಮಾ ಆಗಿದೇಯೋ ಎಂಬುದನ್ನು ತಿಳಿಯಲು Gruhalakshmi DBT Status Check ಮಾಡಬಹುದು.

ಇತರೆ ಮಾಹಿತಿಗಳನ್ನು ಓದಿ:

ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ

ಉಚಿತ ಬೋರ್‌ವೇಲ್: ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಆಹ್ವಾನ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Leave a Comment

error: Content is protected !!