ಎಲ್ಲರಿಗೂ ನಮಸ್ಕಾರ, IDFC FIRST ಬ್ಯಾಂಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಅರ್ಜಿ ಸಲ್ಲಿಸಲು ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ..? ಯಾರು IDFC FIRST Bank Scholarship ಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನೀಡಲಿದ್ದೇವೆ ಓದಿರಿ.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಆದಾಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನದ ಉದ್ದೇಶವು ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳು ಉನ್ನತ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸುವಂತೆ ಮಾಡುವುದಾಗಿದೆ.
ಈ ವಿದ್ಯಾರ್ಥಿವೇತನದ ಅಡಿಯಲ್ಲಿ, 2024-26 ರ ಶೈಕ್ಷಣಿಕ ಸಾಲಿನಲ್ಲಿ ಎರಡು ವರ್ಷಗಳ ಪೂರ್ಣ ಅವಧಿಯ MBA ಕೋರ್ಸ್‌ನ ಮೊದಲ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ತಮ್ಮ MBA ಕೊರ್ಸ್ ನ ಎರಡು ವರ್ಷಗಳವರೆಗೆ 2 ಲಕ್ಷವನ್ನು ಪಡೆದುಕೊಳ್ಳುತ್ತಾರೆ.
IDFC FIRST Bank Scholarship ಅರ್ಹತೆಗಳು:
- ವಿದ್ಯಾರ್ಥಿಗಳು 2 ವರ್ಷದ ಪೂರ್ಣ ಅವಧಿಯ MBA ಕೊರ್ಸ್ ನ ಮೊದಲ ವರ್ಷದಲ್ಲಿ ಅಥವಾ 2024 ರ Class ಗೆ ಸಮಾನವಾಗಿರಬೇಕು.
- ಅರ್ಜಿದಾರರು ಕೇಳಗೆ ನೀಡಲಾಗಿರುವ ಪಟ್ಟಿಯಲ್ಲಿ ಇವರು MBA ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು.
- ಎಲ್ಲಾ ಮೂಲಗಳಿಂದ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
- ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.
IDFC FIRST Bank Scholarship ಅಗತ್ಯ ದಾಖಲೆಗಳು:
- ಪ್ರವೇಶ ಪುರಾವೆ
- ಆದಾಯ ಪ್ರಮಾಣಪತ್ರ
- ಶುಲ್ಕ ರಶೀದಿಯ ಪ್ರತಿ
- ಪದವಿ ಅಂಕಪಟ್ಟಿ,ಉತ್ತೀರ್ಣ ಪ್ರಮಾಣಪತ್ರದ ಪ್ರತಿ
- ಇತರ ದಾಖಲೆಗಳು
ಪ್ರಯೋಜನಗಳು:
ಆಯ್ಕೆಯಾದ MBA ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಪೂರ್ಣ ಅವಧಿಯ MBA ಅಧ್ಯಯನಕ್ಕಾಗಿ 2,00,000 ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ (ವರ್ಷಕ್ಕೆ 1 ಲಕ್ಷ, ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ)
ಅರ್ಜಿ ಸಲ್ಲಿಕೆ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2024
ಪ್ರಮುಖ ಲಿಂಕ್‌ಗಳು:
IDFC Bank Scholarship 2024 ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
SSP Post Matric Scholarship 2024
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ
9 ರಿಂದ 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ 12,000 ರೂ. ವಿದ್ಯಾರ್ಥಿವೇತನ
12,000 ರೂ. ಟಾಟಾ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ
ವಿದ್ಯಾರ್ಥಿವೇತನಕ್ಕೆ ಅರ್ಹರು ಅರ್ಜಿ ಸಲ್ಲಿಸಿ, ಹಣಕಾಸು ನೆರವು ಪಡೆಯಿರಿ