ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ (GDS), BPM, ಮತ್ತು ABPM ಹುದ್ದೆಗಳ ನೇಮಕ ಮಾಡಿಕೊಳ್ಳಲು ಅಧಿಸೂಚನೆ (India Post Recruitment 2024) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಸಾರವಾಗಿ ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಿ.
India Post Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ (India Post)
ವೇತನ ಶ್ರೇಣಿ: 12,000 ರೂ. ರಿಂದ 16,000 ರೂ.
ಹುದ್ದೆಗಳ ಸಂಖ್ಯೆ: 44228
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಭಾರತೀಯ ಅಂಚೆ ಇಲಾಖೆ (India Post) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಗ್ರಾಮೀಣ ಡಾಕ್ ಸೇವಕ್ (GDS), BPM, ಮತ್ತು ABPM – 44,228 ಹುದ್ದೆಗಳು
ವೇತನ ಶ್ರೇಣಿ:
ಗ್ರಾಮೀಣ ಡಾಕ್ ಸೇವಕ್ – 12,000 ರಿಂದ 16,000 ರೂ. ವೇತನವನ್ನು ಇಲಾಖೆಯು ನೀಡುತ್ತದೆ.
India Post GDS Recruitment ವಯೋಮಿತಿ:
ಭಾರತೀಯ ಅಂಚೆ ಇಲಾಖೆ (India Post) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್
India Post Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15-07-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05-08-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: Indiapostgdsonline.gov.in
ಇತರೆ ಮಾಹಿತಿಗಳನ್ನು ಓದಿ:
ಪದವಿಯೊಂದಿಗೆ UPSC ತರಬೇತಿಗೆ ಆನ್‌ಲೈನ್ ಅರ್ಜಿ ಆಹ್ವಾನ
12,000 ರೂ. ಟಾಟಾ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ
IDFC FIRST Bank Scholarship 2024
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ