Infinix Note 40 Pro: 108MP ಕ್ಯಾಮೆರಾ ಇನ್ಫಿನಿಕ್ಸ್‌ ನೋಟ್‌ 40 ಪ್ರೊ, 40 ಪ್ರೊ+ ಮಾರುಕಟ್ಟೆಗೆ ಎಂಟ್ರಿ

Telegram Group Join Now
WhatsApp Group Join Now

ಇನ್ಫಿನಿಕ್ಸ್‌ ಸಂಸ್ಥೆಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಇನ್ಫಿನಿಕ್ಸ್‌ ನೋಟ್‌ 40 ಸರಣಿಯ Infinix Note 40 Pro 5G ಮತ್ತು ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G ಪೋನ್’ಗಳು ಬಿಡುಗಡೆಯಾಗಿವೆ. ಈ ಫೋನ್‌ಗಳು ಆಪಲ್‌ ನ MagSafe ಅನ್ನು ಹೋಲುವ MagCharge ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G ವಿಶೇಷತೆಗಳು:

ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G ಸ್ಮಾರ್ಟ್‌ಫೋನ್‌ ನಲ್ಲಿ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1,080 x 2,436 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಇರಲಿದೆ. ಹಾಗೂ 3D ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 2160 PWM ಡಿಮ್ಮಿಂಗ್‌ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿರುತ್ತದೆ.

ಈ ಸ್ಮಾರ್ಟ್‌ಫೋನ್‌ ನಲ್ಲಿ ಆಕ್ಟಾ-ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್‌ ಇರಲಿದೆ, ಆಂಡ್ರಾಯ್ಡ್‌ 14 ಆಧಾರಿತ XOS 14 ನಲ್ಲಿ ಕೆಲಸ ನಿರ್ವಹಿಸಲಿದೆ.

ಕ್ಯಾಮೆರಾ ಮಾಹಿತಿ:

ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾಗಳನ್ನು ಹೊಂದಿದೆ. ಇದರ ಮೆನ್ ಕ್ಯಾಮೆರಾ 108MP ಸೆನ್ಸಾರ್‌ ಅನ್ನು ಹೊಂದಿದೆ. ಎರಡನೆ ಕ್ಯಾಮೆರಾ 2MP ಡೆಪ್ತ್‌ ಸೆನ್ಸಾರ್‌ ಹೊಂದಿದ್ದು. ಮೂರನೆ ಕ್ಯಾಮೆರಾ 2MP ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಇದೆ. Front Camera 32MP ಸೆಲ್ಫಿ ಕ್ಯಾಮೆರಾ ಹೊಂದಿದೆ.

Infinix Note 40 Pro+ 5G ಬ್ಯಾಟರಿ ಹಾಗೂ ಬೆಲೆ:

ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G ಪೋನ್ 4,600mAh ಸಾಮರ್ಥ್ಯದ ಬ್ಯಾಟರಿ ಇದೆ, 100W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದು, 20W MagCharge ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಇರಲಿದೆ. ಇನ್ಫಿನಿಕ್ಸ್‌ ನೋಟ್‌ 40 ಪ್ರೊ+ 5G – 12GB+256GB ಬೆಲೆ 24,999ರೂ. ಇದೆ.

Infinix Note 40 Pro 5G ವಿಶೇಷತೆಗಳು:

ಇನ್ಫಿನಿಕ್ಸ್‌ ನೋಟ್‌ 40 ಪ್ರೊ 5G ಪೋನ್ ನಲ್ಲಿ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಇದೆ, ಇದು 1,080 x 2,436 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7020 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 14 ಆಧಾರಿತ XOS 14 ಓಎಸ್‌ ಸಪೋರ್ಟ್‌ ಇರಲಿದೆ.

Infinix Note 40 Pro ನಲ್ಲಿ 108MP ಕ್ಯಾಮೆರಾ ಇದೆ. ಎರಡನೇ ಕ್ಯಾಮೆರಾ 2 MP ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೆ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಮುಂಬದಿಯಲ್ಲಿ 32 MP ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಹಾಗೂ ಬೆಲೆ ಮಾಹಿತಿ:

5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 45W ಪಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರಲಿದೆ. Infinix Note 40 Pro 5G ಪೋನ್ 8GB+256GB ನ ಬೆಲೆ 21,999 ರೂ ಇದೆ. Titan gold ಹಾಗೂ Vintage green ಈ ಎರಡು ಆಕರ್ಷಕ ಬಣ್ಣಗಳಲ್ಲಿ ಇದೆ.

Flipkart ನಲ್ಲಿ ಲಭ್ಯವಿದ್ದು, HDFC ಹಾಗೂ SBI ಕ್ರೆಡಿಟ್ ಕಾರ್ಡ್ ಇದ್ದವರಿಗೆ 2000 ರೂ. Instant Discount ಸಿಗಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೊಟೊರೊಲಾ ಎಡ್ಜ್ 50 ಪ್ರೊ

Vivo T3X 5G: ಮಾರುಕಟ್ಟೆಗೆ ಲಗ್ಗೆ ಇಡಲಿದೆ Vivo ಹೊಸ ಸ್ಮಾರ್ಟ್‌ಫೋನ್‌

Realme 12x 5G: ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Realme ಹೊಸ ಪೋನ್

Samsung Galaxy A55 5G

ಗೃಹಲಕ್ಷ್ಮಿ DBT Status Check ಮಾಡಿ

Leave a Comment

error: Content is protected !!