ಎಲ್ಲರಿಗೂ ನಮಸ್ಕಾರ, ಸ್ಮಾರ್ಟ್ ಫೋನ್ ಕಂಪನಿಯುಗಳು ದಿನ ಕಳೆದಂತೆ ಹೊಸ ಹೊಸ ಪೀಚರ್ಸ್ ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಕಡಿಮೆ ಬೆಲೆಗೆ iQOO ಕಂಪನಿಯು iQOO Z9 Lite 5G ಮೊಬೈಲ್ ಅನ್ನು ಲಾಂಚ್ ಮಾಡಿದೆ. ಇದರ ಬೆಲೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
iQOO Z9 Lite 5G ವಿಶೇಷತೆಗಳು:
ಈ ಸ್ಮಾರ್ಟ್ ಫೋನ್ ಅನ್ನು ಇದೆ ತಿಂಗಳು 15-07-2024 ರಂದು ಬಿಡುಗಡೆ ಮಾಡಲಾಗಿದೆ. iQOO Z9 Lite 5G ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. 6.56-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 720×1612 ಪಿಕ್ಸೆಲ್‌ಗಳ (HD+) ರೆಸಲ್ಯೂಶನ್ ನೀಡುತ್ತದೆ. ಹಾಗೂ 90 Hz ರಿಫ್ರೆಶ್ ದರ ಹೊಂದಿದೆ. ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.
ಕ್ಯಾಮೆರಾ ಮಾಹಿತಿ:
ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮರಾ ಸೆಟಪ್ ಅನ್ನು ಹೊಂದಿದೆ.
ಬ್ಯಾಟರಿ ಮಾಹಿತಿ:
ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. 15W ಚಾರ್ಜಿಂಗ್ ಸೌಲಭ್ಯ ಇರಲಿದೆ. iQOO Z9 Lite ಅಳತೆ 163.63 x 75.58 x 8.30mm (ಎತ್ತರ x ಅಗಲ x ದಪ್ಪ) ಮತ್ತು 185.00 ಗ್ರಾಂ ತೂಕ ಇದೆ.
ಬಣ್ಣ ಮಾಹಿತಿ:
iQOO Z9 Lite 5G ಸ್ಮಾರ್ಟ್ ಫೋನ್ ಎರಡು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಆಕ್ವಾ ಫ್ಲೋ (Aqua Flow) ಹಾಗೂ ಮೋಚಾ ಬ್ರೌನ್ (Mocha Brown) ಗ್ರಾಹಕರು ತಮ್ಮ ಇಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.
iQOO Z9 Lite Storage ಮಾಹಿತಿ:
4GB RAM ಹಾಗೂ 128GB Storage ನ ಬೆಲೆ: 10,498 ರೂ.
6GB RAM ಹಾಗೂ 128GB Storage ನ ಬೆಲೆ: 11,498 ರೂ.
ಇತರೆ ಮಾಹಿತಿಗಳನ್ನು ಓದಿ: