Jio Recharge Price: ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್‌ ರೀಚಾರ್ಜ್‌ ಶುಲ್ಕ ಶೇ.27 ರವರೆಗೆ ಏರಿಕೆ, ಅನ್‌ಲಿಮಿಟೆಡ್ ಬಳಕೆಗೆ ಶರತ್ತು ಅನ್ವಯ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಿಲಯನ್ಸ್‌ ಜಿಯೋ ಕಂಪನಿಯ ಗ್ರಾಹಕರಿಗೆ ಬಿಗ್ ಶಾಕ್. ಮೊಬೈಲ್‌ ರೀಚಾರ್ಜ್‌ ಶುಲ್ಕವನ್ನು ಕಂಪನಿಯು 12 ರಿಂದ ಶೇ.27 ರವರೆಗೆ ಏರಿಕೆ (Jio Recharge Price) ಮಾಡಿದ್ದು ಇದರಿಂದ ಗ್ರಾಹಕರಿಗೆ ಹೊರೆಯಲಾಗಲಿದೆ. ನಿವೇನಾದರು ಜಿಯೋ ಗ್ರಾಹಕರಾಗಿದ್ದರೆ ಈ ಮಾಹಿತಿಯನ್ನು ತಪ್ಪದೆ ನೋಡಿ.

ಪ್ರಮುಖ ಮೊಬೈಲ್‌ ಸೇವಾ ಕಂಪನಿಗಳಲ್ಲಿ ಒಂದಾದಗಿರುವ ರಿಲಯನ್ಸ್‌ ಜಿಯೋ ಕಂಪನಿಯು ರೀಚಾರ್ಜ್‌ ಶುಲ್ಕ (Jio Recharge) ವನ್ನು ಏರಿಕೆ ಮಾಡುತ್ತಿದೆ. ಇನ್ನು ಮುಂದೆ 5G ಸೇವೆಗಳ ಅನಿಯಮಿತ ಬಳಕೆ ಮೇಲೆ ನಿರ್ಬಂಧ ಹೇರಲಾಗಿತ್ತದೆ.

47 ಕೋಟಿ ಗ್ರಾಹಕರ ಮೂಲಕ ಮಾರುಕಟ್ಟೆಯಲ್ಲಿ ಶೇ.41 ಪಾಲುದಾರಿಕೆ ಹೊಂದಿರುವ ಜಿಯೋ ಪ್ರಥಮ ಸ್ಥಾನದಲ್ಲಿದೆ. ಜುಲೈ 03 ರಿಂದ ರೀಚಾರ್ಜ್ ದರಗಳನ್ನು ಹೆಚ್ಚಿಸಲು ಜಿಯೋ ನಿರ್ಧರಿಸಿದೆ. ಏರ್‌ಟೆಲ್, ವೊಡಾಫೋನ್ ಕಂಪನಿಗಳು ಕೂಡ ದರ ಹೆಚ್ಚಿಸುವ ಸಾಧ್ಯತೆಗಳಿವೆ.

ರೀಚಾರ್ಜ್‌ನ ಮೊತ್ತವನ್ನು 15 ರೂ. ನಿಂದ 19 ರೂ.ಗೆ ಹೆಚ್ಚಳ ಮಾಡಲಾಗಿದೆ. 1 ಜಿಬಿ ಡಾಟಾ ಆ್ಯಡ್ ಆನ್ ಪ್ಯಾಕ್‌ನ ಶುಲ್ಕವು 19 ರೂ. ಆಗಲಿದೆ. ಇನ್ನು 84 ದಿನಗಳ 666 ರೂ. ಪ್ಲಾನ್ ಅನ್ನು 799 ರೂ. ಗೆ ಏರಿಕೆಮಾಡಲಾಗಿದೆ. 75 ಜಿಬಿ ಪೋಸ್ಟ್ ಪೇಯ್ಡ್ ಡಾಟಾ ಬೆಲೆ 399 ರೂ .ನಿಂದ 449‌ ರೂ. ಇರಲಿದೆ, 1599 ರೂ. 1899 ರೂ ಆಗಲಿದೆ. 2999 ರೂ. ವಾರ್ಷಿಕ ಪ್ಯಾಕ್ ಅನ್ನು 3599 ರು.ಗೆ ಹೆಚ್ಚಿಸಲಾಗಿದೆ.

ಎರಡು ಹೊಸ ಸೇವೆಗಳನ್ನು ಕಂಪನಿಯು ಗ್ರಾಹಕರಿಗೆ ನೀಡಿದೆ. ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್‌ಲೇಟ್ ಎಂಬ ಎರಡು ಆ್ಯಪ್‌ಗಳನ್ನು ಒಂದು ವರ್ಷದ ಅವಧಿಗೆ ಗ್ರಾಹಕರಿಗೆ ಉಚಿತವಾಗಿ ನೀಡಲು ಜಿಯೋ ನಿರ್ಧರಿಸಿದೆ.

ಈಗಾಗಲೇ 239 ರು. ಮೇಲ್ಪಟ್ಟ ಎಲ್ಲಾ ರೀಚಾರ್ಜ್ ಪ್ಲಾನ್’ಗಳಿಗೆ ಅನ್’ಲಿಮಿಟೆಡ್ 5G ಇಂಟರ್ನೆಟ್ ನೀಡಲಾಗಿತ್ತು ಆದರೆ ಇದೀಗ ಪ್ರತಿ ನಿತ್ಯ 2 ಜಿಬಿ ಹಾಗೂ ಅದಕ್ಕಿಂತ ಮೇಲ್ಪಟ್ಟ ರೀಚಾರ್ಜ್ ಪ್ಲಾನ್’ಗಳಿಗೆ ಮಾತ್ರ ಅನಿಯಮಿತ 5ಜಿ ಇಂಟರ್ನೆಟ್ ಬಳಕೆಗೆ ಲಭ್ಯವಿರಲಿದೆ.

Jio Recharge Price Hike:

Jio Recharge Price Hike

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

3 ಲಕ್ಷ ರೂ. ಸಬ್ಸಿಡಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

Leave a Comment

error: Content is protected !!