ಕೊಟಕ್ ವಿದ್ಯಾರ್ಥಿವೇತ 2024-2025 | Kotak Kanya Scholarship 2025 Apply Online @buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕೊಟಕ್ ಸ್ಕಾಲರ್‌ಶಿಪ್ ಗೆ ಅರ್ಜಿ ಸಲ್ಲಿಸಬೇಕೆ..? ಯಾರು ಅರ್ಜಿ ಸಲ್ಲಿಸಬಹುದು, ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ..? Kotak Kanya Scholarship 2025 ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್‌ಶಿಪ್ ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಎಜುಕೇಶನ್ ಫೌಂಡೇಶನ್‌ನ ವತಿಯಿಂದ ಕೊಟಕ್ ಕನ್ಯಾ ವಿದ್ಯಾರ್ಥಿವೇತನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 1.5 ಲಕ್ಷ ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಕಡಿಮೆ ಆದಾಯದ ಹೊಂದಿರುವ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ 12 ನೇ ತರಗತಿಯ ನಂತರ ವೃತ್ತಿಪರ ಕೊರ್ಸ್ ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸಲು ಹಣಕಾಸಿನ ನೆರವು ನೀಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

12 ನೇ ತರಗತಿ ಉತ್ತೀರ್ಣರಾದ ಮತ್ತು MBBS, BDS, Integrated LLB (5 Years), B. Pharmacy, B.Sc. Nursing, Integrated BS-MS/BS-Research, in ISER, IISC (Bangalore) ಮತ್ತು (Design, Architecture, etc.) ಮುಂತಾದ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

Kotak Kanya Scholarship 2025 ಅರ್ಹತೆ:

  • 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಇರಬೇಕು.
  • ವೃತ್ತಿಪರ ಕೊರ್ಸ್ ಗಳಿಗೆ ಮಾನ್ಯತೆ ಪಡೆದ ಎನ್‌ಐಆರ್‌ಎಫ್/ಎನ್‌ಎಸಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರು ಅರ್ಹರು.
  • ಕೋಟಕ್ ಮಹೀಂದ್ರಾ ಗ್ರೂಪ್, ಕೋಟಕ್ ಎಜುಕೇಶನ್ ಫೌಂಡೇಶನ್ ಮತ್ತು ಬಡ್ಡಿ4 ಸ್ಟಡಿ ಉದ್ಯೋಗಿಗಳ ಮಕ್ಕಳು ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2024-25ಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಪ್ರಯೋಗಗಳು:

  • ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಪದವಿ ಕೋರ್ಸ್/ಪದವಿಯನ್ನು ಪೂರ್ಣಗೊಳಿಸುವವರೆಗೆ ವರ್ಷಕ್ಕೆ 1.5 ಲಕ್ಷ ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
  • ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2024-25 ರ ಅಡಿಯಲ್ಲಿ ವಿದ್ಯಾರ್ಥಿವೇತನದ ಮೊತ್ತವನ್ನು ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಇಂಟರ್ನೆಟ್, ಸಾರಿಗೆ, ಲ್ಯಾಪ್‌ಟಾಪ್‌ಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒಳಗೊಂಡಂತೆ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಬಳಸಿಕೊಳ್ಳಬಹುದು.

Kotak Kanya Scholarship ಅಗತ್ಯ ದಾಖಲೆಗಳು:

  • 12 ತರಗತಿ ಅಂಕಪಟ್ಟಿ.
  • ಆದಾಯ ಪ್ರಮಾಣ ಪತ್ರ.
  • FY 2023-24 ಗಾಗಿ ಪೋಷಕರ ITR (ಲಭ್ಯವಿದ್ದರೆ)
  • Fee structure (for academic year 2024-25)
  • Bonafide student certificate/letter from college
  • College seat allocation document
  • ಕಾಲೇಜು ಪ್ರವೇಶ ಪರೀಕ್ಷೆಯ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 19-01-2025

ಪ್ರಮುಖ ಲಿಂಕ್‌ಗಳು:
Kotak Scholarship Apply Online ಲಿಂಕ್:‌ Apply ಮಾಡಿ

ಇತರೆ ಮಾಹಿತಿಗಳನ್ನು ಓದಿ:

HDFC Scholarship 2024 Apply

SSP Post Matric Scholarship 2024

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ

IDFC FIRST Bank Scholarship 2024

Leave a Comment

error: Content is protected !!