ಎಲ್ಲರಿಗೂ ನಮಸ್ಕಾರ, ಮೊಟೊರೊಲಾ ಕಂಪನಿಯು ಎಡ್ಜ್ ಸರಣಿಯ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ನ್ನು ಬಿಡುಗಡೆ ಮಾಡಲಿದೆ. ಇದು ಆಕರ್ಷಕ ಬಣ್ಣಗಳನ್ನು ಹೊಂದಿದೆ. ಏಪ್ರಿಲ್ 16 ರಂದು Motorola Edge 50 Fusion ಬಿಡುಗಡೆಯಾಗುತ್ತಿದೆ. ಯಾವೇಲ್ಲಾ ಪೀಚರ್ಸ್ ಗಳನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಮೊಟೊರೊಲಾ ಎಡ್ಜ್ 50 ಫ್ಯೂಷನ್ ವಿಶೇಷತೆಗಳು:
ಈ ಫೋನ್ ನಲ್ಲಿ ಕ್ವಾಲ್ಕಾಮ್ Snapdragon 7 Gen 2 ಪ್ರೊಫೆಸರ್ ಇರಲಿದೆ. 144 Hz ರಿಫ್ರೆಶ್ ರೇಟ್ ಹಾಗೂ 6.70 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 2400×1080 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ಹೊಂದಿದೆ. Motorola Edge 50 Fusion Android 14 ಅನ್ನು ರನ್ ಮಾಡುತ್ತದೆ. ಬ್ರೈಟ್ ನೆಸ್ 1600 ನಿಟ್ಸ್ ಹೊಂದಿದೆ. ಸೂರ್ಯನ ಬೆಳಕಿನಲ್ಲೂ ಈ ಫೋನ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. 3D ಕರ್ವ್ ಡಿಸ್‌ಪ್ಲೇ ಯನ್ನು ಹೊಂದಿದೆ.
Motorola Edge 50 Fusion ಬ್ಯಾಟರಿ ಹಾಗೂ ಬಣ್ಣ:
ಈ ಸ್ಮಾರ್ಟ್‌ಫೋನ್ ನಲ್ಲಿ 5000mAh ಬ್ಯಾಟರಿ ಹೊಂದಿದೆ. 68W ಟರ್ಬೊ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Forest Blue, Marshmallow Blue, Hot Pink ಮುರು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಕ್ಯಾಮೆರಾ:
ಮೊಟೊರೊಲಾ ಎಡ್ಜ್ 50 ಫ್ಯೂಷನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಮುಂಭಾಗದ 32 ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿರುವ ಸೆಲ್ಫಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಸಂಗ್ರಹಣ ಸಾಮರ್ಥ್ಯ:
128GB 8GB RAM, 256GB 8GB RAM, 256GB 12GB RAM, 512GB 12GB RAM ಸಾಮರ್ಥ್ಯ ಇರಲಿದೆ. ಈ ಫೋನ್ ಮಿಡ್‌ರೇಂಜ್ ನಲ್ಲಿ ಲಾಂಚ್ ಆಗಲಿದೆ.
ಈ ಮಾಹಿತಿಗಳನ್ನು ಓದಿ: