New Ration Card Update: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ…? ಈ ದಾಖಲೆಗಳಿದ್ದರೆ ಸಾಕು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಹೊಸ ರೇಷನ್ ಕಾರ್ಡ್‌ (New Ration Card) ಗೆ ಅರ್ಜಿ ಸಲ್ಲಿಸಬೇಕೆ..? ಅರ್ಜಿ ಸಲ್ಲಿಸಲು ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದಿಲ್ಲವೇ..? ಸದ್ಯಕ್ಕೆ ಲೋಕಸಭೆ ಚುನಾವಣೆಯ ಕಾರಣ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೇ ತಾತ್ಕಾಲಿಕವಾಗಿ ಸ್ಥಗಿತವಾಗಿವೆ.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಯಾವೇಲ್ಲಾ ಅಗತ್ಯ ದಾಖಲೆಗಳು ಬೇಕಾಗುತ್ತವೇಯೊ ಅವುಗಳನ್ನು ಸಿದ್ಧಪಡಿಸಿಕೊಳ್ಳಿ ಅರ್ಜಿ ಸಲ್ಲಿಕೆ ಆರಂಭವಾದ ನಂತರ ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಿ. ಸರ್ಕಾರವು ನೀಡುವ ಯೋಜನೆಗಳ ಲಾಭ ಪಡೆದುಕೊಳ್ಳಿ.

ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಪಡಿತರ ಚೀಟಿಯನ್ನು ನೀಡುತ್ತದೆ. ರೇಷನ್ ಕಾರ್ಡ ಹೊಂದಿದವರಿಗೆ ಸರ್ಕಾರದ ಹಲವಾರು ಸೌಲಭ್ಯಗಳು ದೊರೆಯುತ್ತವೆ. ರೇಷನ್ ಕಾರ್ಡ್‌ ಹೊಂದಿದವರು ಸರ್ಕಾರ ನೀಡುತ್ತೀರುವ ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆಯ ಹಾಗೂ ಮುಂತಾದ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.

ಹೊಸ BPL ಹಾಗೂ APL Card ಗೆ ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.

New Ration Card Documents:

  • ವಾಸಸ್ಥಳದ ಪುರಾವೆಗಳು (ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಇತ್ಯಾದಿ [ಸ್ಕ್ಯಾನ್ ಮಾಡಿದ ಪ್ರತಿ])
  • ವಯಸ್ಸಿನ ಪ್ರಮಾಣಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
  • ಗುರುತಿನ ಪುರಾವೆ (ಸ್ಕ್ಯಾನ್ ಮಾಡಿದ ಪ್ರತಿ)
  • ಕುಟುಂಬದ ಆದಾಯ ಪ್ರಮಾಣ ಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
  • ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ
  • ಬಾಡಿಗೆ ಒಪ್ಪಂದ (ಅನ್ವಯವಾದಲ್ಲಿ)

ಲೋಕಸಭೆ ಚುನಾವಣಾ ಪ್ರಕ್ರೀಯೆ ಅಂತಿಮ ಘಟ್ಟ ಪಲುಪಿದ್ದು, ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಹೊಸ ಪಡಿತರ ಚೀಟಿ (New Ration Card) ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಈ ಮೊದಲು ಹೊಸ ರೇಷನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅರ್ಹರಿಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ತೆರುವಾದ ನಂತರ ರೇಷನ್‌ ಕಾರ್ಡ್‌ ಅರ್ಜಿ ಮತ್ತು ವಿತರಣಾ ಪ್ರಕ್ರೀಯೆ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ:

ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ Secugen ಬಯೋಮೆಟ್ರಿಕ್ ಸೌಲಭ್ಯವಿರುವ ನಿಮ್ಮ ಹತ್ತಿರದ CSC ಸೆಂಟರ್, ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು.

ರೇಷನ್‌ ಕಾರ್ಡ್‌ಗೆ ಸಂಬಂಧಿಸಿ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

ರೇಷನ್‌ ಕಾರ್ಡ್‌ Status Check ಮಾಡಿ

ಸರ್ಕಾರದಿಂದ ಪ್ರತಿ ತಿಂಗಳು 800 ರೂ. ಜಮಾ, ಅರ್ಜಿ ಸಲ್ಲಿಸಿ

ಮೊಬೈಲ್‌ನಲ್ಲೇ ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಬಂದಿಲ್ಲವೇ..? ಸರ್ಕಾರದಿಂದ ಹೊಸ ಅಪಡೇಟ್‌

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

1 thought on “New Ration Card Update: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ…? ಈ ದಾಖಲೆಗಳಿದ್ದರೆ ಸಾಕು”

Leave a Comment

error: Content is protected !!