ಎಲ್ಲರಿಗೂ ನಮಸ್ಕಾರ, ಪ್ಯಾನಾಸೋನಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? Panasonic Scholarship 2024 ಅರ್ಜಿ ಸಲ್ಲಿಕೆ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸಲು ಕಡಿಮೆ ಆದಾಯದ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಗುರಿಯನ್ನು ಹೊಂದಿದೆ. ಈ ವಿದ್ಯಾರ್ಥಿವೇತನವು ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುರಿಸಲು ಸಹಾಯಕವಾಗಿದೆ.
ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾ ವತಿಯಿಂದ ರಟ್ಟಿ ಛತ್ರ್ ಸ್ಕಾಲರ್‌ಶಿಪ್ (Ratti Chhatr Scholarship) ಅನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನವು BE/B.Tech ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳವರೆಗೆ ವರ್ಷಕ್ಕೆ 70,250 ರೂ. ಆರ್ಥಿಕ ಸಹಾಯವನ್ನು ನೀಡುತ್ತದೆ.
Panasonic Scholarship 2024 ಅರ್ಹತೆಗಳು:
- B.E./B.Tech ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು. 2024-25 ರಲ್ಲಿ ಯಾವುದೇ IIT ಗಳಲ್ಲಿ ನ ಕೋರ್ಸ್‌ಗಳು ಅರ್ಹವಾಗಿವೆ.
- ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕೆಯಲ್ಲಿ 75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
- ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 8 ಲಕ್ಷ ಕಿಂತ ಕಡಿಮೆ ಇರಬೇಕು.
- ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- 2024-25 ಸಾಲಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- Buddy4Study ಹಾಗೂ Panasonic ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಪ್ರಯೋಜನಗಳು:
ಪ್ಯಾನಾಸೋನಿಕ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳವರೆಗೆ ವರ್ಷಕ್ಕೆ 70,250 ರೂ. ರಂತೆ ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬಹುದು.
ದಾಖಲೆಗಳು:
- ದ್ವಿತೀಯ ಪಿಯುಸಿ ಅಂಕಪಟ್ಟಿ (2023-24).
- ಆಧಾರ್ ಕಾರ್ಡ್/ಮತದಾರ ಗುರುತಿನ ಚೀಟಿ/ಚಾಲನಾ ಪರವಾನಗಿ/PAN ಕಾರ್ಡ್.
- ಪ್ರವೇಶ ಪತ್ರ
- ಮೊದಲ ಸೆಮಿಸ್ಟರ್ ಶುಲ್ಕ ರಶೀದಿ.
- ಬ್ಯಾಂಕ್ ಖಾತೆ ವಿವರ.
- ಆದಾಯ ಪ್ರಮಾಣಪತ್ರ.
- ಭಾವಚಿತ್ರ (ಪೋಟೋ)
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-08-2024
ಪ್ರಮುಖ ಲಿಂಕ್‌ಗಳು:
Panasonic Scholarship Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
12,000 ರೂ. ಟಾಟಾ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ
IDFC FIRST Bank Scholarship 2024
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ