PM Kisan 17th Installment Date 2024: PM Kisan ಸಮ್ಮಾನ್ ನಿಧಿ ಯೋಜನೆಯ 17 ಕಂತಿನ ಹಣ ಜಮಾ ಯಾವಾಗ..?

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 17 ಕಂತಿನ (PM Kisan 17th Installment) ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದೀರಾ..? ಈ ಯೋಜನೆಯ ಮೂಲಕ ಅರ್ಹ ರೈತರಿಗೆ ವರ್ಷಕ್ಕೆ 6000 ರೂ. ಅನ್ನು ಕೇಂದ್ರ ಸರ್ಕಾರ ಅವರ ಖಾತೆಗಳಿಗೆ ಸಂದಾಯ ಮಾಡುತ್ತಿದೆ.

ಹೌದು ಕೇಂದ್ರ ಸರ್ಕಾರ ರೈತರಿಗೆ ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅನ್ನು ನೀಡಲಾಗುತ್ತದೆ. ಹಲವಾರು ರೈತರು ಈ ಯೊಜನೆಯ ಲಾಭ ಪಡೆದುಕೊಂಡಿದ್ದಾರೆ.

PM Kisan: ಪಿಎಂ ಕಿಸಾನ್ ಸಮ್ಮಾನ ನಿಧಿ 17 ನೇ ಕಂತಿನ ಹಣ ಬಿಡುಗಡೆ

PM Kisan 17th Installment Date 2024:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಈಗಾಗಲೇ ಜಮಾ ಆಗಿದ್ದು 17 ನೇ ಕಂತಿನ ಹಣವು ಶೀಘ್ರದಲ್ಲೇ ರೈತರಿಗೆ ಸಿಗಲಿದೆ ಎಂದು ವರದಿಗಳ ಪ್ರಕಾರ ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪಿಎಂ-ಕಿಸಾನ್ 17 ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಸರ್ಕಾರ ರಚನೆಯ ನಂತರ, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ (PM Kisan 17th Installment) 2,000 ರೂಪಾಯಿಗಳನ್ನು ನಿಮ್ಮ ಖಾತೆಗೆ ವರ್ಗಾಯಿಸಲಿದೆ.

ಸರ್ಕಾರವು ರೈತರನ್ನು ಆರ್ಥಿಕವಾಗಿ ಬಲಪಡಿಸಲು ಈ ಯೋಜನೆಯನ್ನು ಪ್ರಾರಂಭಿಸಿತ್ತು, ಅಧಿಕೃತವಾಗಿ ಈ ಯೋಜನೆಯಲ್ಲಿ ಸುಮಾರು 12 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ.

ಪಿಎಂ-ಕಿಸಾನ್ 16 ನೇ ಕಂತಿನ ಹಣವನ್ನು ಫೆಬ್ರವರಿ 28 ರಂದು ಅರ್ಹ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗಿದೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ 21 ಕೋಟಿಗೂ ಅಧಿಕ ನೇರ ವರ್ಗಾವಣೆ ಮಾಡಿದ್ದಾರೆ‌.

ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ ಅಂದರೆ ವರ್ಷಕ್ಕೆ 6,000 ರೂ. ದೊರೆಯಲಿದೆ. ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

Crop Insurance Karnataka: ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ

ಪೋಸ್ಟ್ ಆಫೀಸ್ ನಲ್ಲಿ ಎಫ್‌ಡಿ ಮಾಡಿ, ದುಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ

ಮೊಬೈಲ್‌ನಲ್ಲೇ ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಿ

ರೇಷನ್‌ ಕಾರ್ಡ್‌ Status Check ಮಾಡಿ

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಅನ್ನಭಾಗ್ಯ ಹಣ ನಿಮಗೆ ಜಮಾ ಆಗಿಲ್ಲವೇ?, ಇಲ್ಲಿದೆ ಹೊಸ Update

Leave a Comment

error: Content is protected !!