ನಮಸ್ಕಾರ ಸ್ನೇಹಿತರೇ.. ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೀರಾ..? ನಿಮ್ಮ ಬಳಿ ಈಗಾಗಲೇ ರೇಷನ್ ಕಾರ್ಡ್ ಇದೆಯೇ..? Ration Card Status Karnataka ಚೆಕ್ ಮಾಡಬೇಕಾ..? ಹಾಗಿದ್ದರೆ ಈ ಲೇಖನವನ್ನು ಓದಿರಿ.
ರೇಷನ್ ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದ ನಂತರ ಹಾಗೂ ಅನ್ನಭಾಗ್ಯ DBT ಹಣ ಪಡೆಯಲು BPL ಕಾರ್ಡ್‌ಗೆ ಭಾರಿ ಬೇಡಿಕೆ ಹೆಚ್ಚಾಗಿದೆ.
ಅದಕ್ಕಾಗಿ ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ಲೇಖನದಲ್ಲಿ Ration Card Status Check ಮಾಡುವ ಸರಳ ವಿಧಾನವನ್ನು ತಳಿಸಲಾಗಿದೆ.
How To Check Ration Card Status Karnataka?
ನಿಮ್ಮ ಹೊಸ ರೇಷನ್ ಕಾರ್ಡ್ ಅಥವಾ ಹಾಲಿ ಪಡಿತರ ಚೀಟಿ ಸ್ಥಿತಿಯನ್ನು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ವಿನಂತಿ ಸ್ಥಿತಿ ನೋಡಲು ಈ ವಿಧಾನವನ್ನು ಅನುಸರಿಸಿ.
New Ration Card Status Check ಮಾಡುವ ವಿಧಾನ:
ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರು ಈ ಕೇಳಗಿನ ವಿಧಾನವನ್ನು ಅನುಸರಿಸಿ New Ration Card Status Check ಮಾಡಬಹುದು.
- Step-1: ಮೊದಲಿಗೆ ಕೇಳಗೆ ನೀಡಲಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: Ration Card Status Module ಎಂಬ ಆಯ್ಕೆ ಓಪನ್ ಆಗುತ್ತದೆ. ಅದರಲ್ಲಿ ವಿಭಾಗಗಳಿಗೆ ಅನುಸಾರ ಜಿಲ್ಲೆಗಳ ಹೆಸರಿರುವ ಲಿಂಕ್ ಇದೆ. ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

- Step-3: ನಂತರ ಮತ್ತೊಂದು ಪುಟ ಓಪನ್ ಆಗುತ್ತದೆ. ಅಲ್ಲಿ ಮೊದಲ ಆಯ್ಕೆ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿ.

- Step-4: ತದನಂತರ ನೀವು ನಗರವಾಸಿಗಳಾಗಿದ್ದರೆ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ. Enter Acknowledgment No ಎಂಬಲ್ಲಿ ನೀವು ಅರ್ಜಿ ಸಲ್ಲಿಸಿದ ನಂತರ ನಿಮಗೆ ನೀಡಲಾಗಿರುವ Acknowledgment No ಅನ್ನು ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ.

- Step-5: ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ, Rural ಎಂಬುದನ್ನು ಆಯ್ಕೆ ಮಾಡಿ. Acknowledgment No ಎಂಟರ್ ಮಾಡಿ, ನಿಮ್ಮ ಜಿಲ್ಲೆ, ತಾಲೂಕು, ನಿಮ್ಮ ಗ್ರಾಮ ಪಂಚಾಯತಿಯ ಹೆಸರನ್ನು ಆಯ್ಕೆ ಮಾಡಿ. Go ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹೊಸ ರೇಷನ್ ಕಾರ್ಡ್ ಸ್ಥಿತಿ ತಿಳಿಯಬಹುದು.

ನಿಮ್ಮ ಹಾಲಿ/ಈಗೀರುವ ರೇಷನ್ ಕಾರ್ಡ್ ಸ್ಥಿತಿ ನೋಡುವ ವಿಧಾನ:
- Step-1: ಮೊದಲಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (ಕೇಳಗೆ ಲಿಂಕ್ ನೀಡಲಾಗಿದೆ.)
- Step-2: ಆಹಾರ ಇಲಾಖೆ ವೆಬ್‌ಸೈಟ್’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂದಿರುವ Option ಮೇಲೆ ಕ್ಲಿಕ್ ಮಾಡಿ.

- Step-3: ಎಡ ಭಾಗದಲ್ಲಿ ಮೂರು ಗೆರೆಗಳಿವೆ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಇ-ಸ್ಥಿತಿ ಎಂಬ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ. ಅದರ ಕೇಳ ಭಾಗದಲ್ಲಿಯೇ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಎಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

- Step-4: ಹೊಸದೊಂದು ಪುಟ ತೆರೆಯುತ್ತದೆ. ಅಲ್ಲಿ ವಿಭಾಗವಾರು ಬೇರೆ ಬೇರೆ ಲಿಂಕ್‌ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನೀವು ಬೇರೆ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ Data Not Found ಎಂದು ತೊರಿಸುತ್ತದೆ ಗಮನಿಸಿ.

- Step-5: ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು ಎರಡನೇ ಆಯ್ಕೆ Status Of Ration Card ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

- Step-6: ಮುಂದಿನ ಪುಟದಲ್ಲಿ With OTP ಎಂಬುದನ್ನು ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.

- Step-7: Select ಎಂಬುದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಕುಟುಂಬದ ಯಾವ ಸದಸ್ಯರ ಆಧಾರಗೆ ಮೊಬೈಲ್ ನಂಬರ್ ಲಿಂಕ್ ಇರಯತ್ತದೆ ಅವರ ಹೆಸರನ್ನು Select ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

- Step-8: ನೀವು ಸೇಲೆಕ್ಟ್ ಮಾಡಿದ ಸದಸ್ಯರ ಮೊಬೈಲ್ ನಂಬರ್‌ಗೆ ಆಧಾರ ಇಲಾಖೆ ಇಂದು ಒಂದು OTP ಬರುತ್ತದೆ. Enter OTP ಎಂಬಲ್ಲಿ ಅದನ್ನು ನಮೂದಿಸಿ. Go ಬಟನ್ ಮೇಲೆ ಕ್ಲಿಕ್ ಮಾಡಿ.

- Step-9: ಅಂತಿಮವಾಗಿ ನಿಮ್ಮ ರೇಷನ್ ಕಾರ್ಡ್ ಮಾಹಿತಿ ಸ್ಥಿತಿ ನೋಡಬಹುದು. ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು, ಅವರ ಆಧಾರ ಸಂಖ್ಯೆಯ ಕೊನೆಯ 4 ಅಂಕಿಗಳು ಮತ್ತು Ration Card eKYC Status ವಿವರ ಲಭ್ಯವಾಗುತ್ತದೆ. ನಿಮ್ಮ ಪಡಿತರ ಚೀಟಿ Active ಇದ್ದು ಹಸಿರು ಬಣ್ಣದಲ್ಲಿ Active ಎಂದು ಬರುತ್ತದೆ.

ಪ್ರಮುಖ ಲಿಂಕ್‌ಗಳು:
Ration Card Status Online: Check Link
ಅಧಿಕೃತ ವೆಬ್‌ಸೈಟ್: ahara.kar.nic.in
ಕೊನೆಯ ಮಾತು: ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration Card Status Karnataka)ಯನ್ನು ತಿಳಿಯಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.
ಇತರೆ ಮಾಹಿತಿಗಳನ್ನು ಓದಿ:
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ…? ಈ ದಾಖಲೆಗಳಿದ್ದರೆ ಸಾಕು
2 thoughts on “ರೇಷನ್ ಕಾರ್ಡ್ Status Check ಮಾಡಿ | Ration Card Status Karnataka 2024 Check Online @ahara.kar.nic.in”