Realme ಕಂಪನಿಯು ತನ್ನ GT ಸರಣಿಯ Realme GT 6T ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಪೋನ್ ನಲ್ಲಿ ಕಂಪನಿಯು ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
Realme GT 6T ವೈಶಿಷ್ಟ್ಯತೆಗಳು:
Qualcomm Snapdragon 7 Plus Gen 3 ಅನ್ನು ಹೊಂದಿದೆ. ಡ್ಯುಯಲ್-ಸಿಮ್ (ನ್ಯಾನೋ) Realme GT 6T Android 14-ಆಧಾರಿತ Realme UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಇದು 6.78 ಇಂಚಿನ ಪೂರ್ಣ-HD+ (1,264×2,780 ಪಿಕ್ಸೆಲ್‌ಗಳು) LTPO MOLED ಡಿಸ್‌ಪ್ಲೇ ಹೊಂದಿದ್ದು 120Hz ರಿಫ್ರೆಶ್ ದರ ಮತ್ತು 1,000 nits ಗರಿಷ್ಠ ಹೊಳಪನ್ನು ಹೊಂದಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಬ್ಯಾಟರಿ ಹಾಗೂ ಬಣ್ಣಗಳ ಮಾಹಿತಿ:
Realme GT 6T ಸ್ಮಾರ್ಟ್‌ಫೋನ್ ನಲ್ಲಿ ಕಂಪನಿಯು 5,500mAh ಬ್ಯಾಟರಿಯನ್ನು ನೀಡಿದೆ. 120W SuperVOOC ಪಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಫ್ಲೂಯಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್ ಎರಡು ಬಣ್ಣಗಳ ಆಯ್ಕೆಯನ್ನು ಕಂಪನಿಯು ಗ್ರಾಹಕರಿಗೆ ನೀಡಿದೆ.
ಕ್ಯಾಮೆರಾ ಮಾಹಿತಿ:
ಡ್ಯುಯಲ್ ಕ್ಯಾಮೆರಾ ಸೆಟಪ್ ನ್ನು ಹೊಂದಿದೆ. ಮುಂಬಾಗದಲ್ಲಿ 50 MP ವೈಡ್ ಆಂಗಲ್ ಕ್ಯಾಮೆರಾ ಇದೆ ಹಾಗೂ 8 MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಇರಲಿದೆ. ಮುಂಭಾಗದಲ್ಲಿ 32 MP ಸೇಲ್ಪಿ ಕ್ಯಾಮೆರಾ ಸೆಟಪ್ ಹೊಂದಿದೆ. ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಸೌಲಭ್ಯ ಇರಲಿದೆ.
ಸಂಗ್ರಹಣೆ ಹಾಗೂ ಬೆಲೆ:
8 GB RAM ಹಾಗೂ 128 GB Storage ನ ಬೆಲೆ : 26,999 ರೂ. ಇರಲಿದೆ.
8 GB RAM ಹಾಗೂ 256 GB Storage ನ ಬೆಲೆ: 28,999 ರೂ. ಇದೆ.
12 GB RAM ಹಾಗೂ 256 GB Storage ನ ಬೆಲೆ: 31,999 ರೂ.
12 GB RAM ಹಾಗೂ 512 GB Storage ನ ಬೆಲೆ: 35,999 ರೂ. ಇರಲಿದೆ.

ಬ್ಯಾಂಕ್ offers:
ICICI Bank, HDFC BANK ಹಾಗೂ SBI Debit/Credit Card ನಿಂದ ಖರೀದಿ ಮಾಡಿದರೆ 4,000 ರೂ. ರಿಯಾಯಿತಿ ಇರುತ್ತದೆ. ಅಮೆಜಾನ್ ಹಾಗೂ ರಿಯಲ್ ಮಿ ಕಂಪನಿಯ ವೆಬ್ ಸೈಟ್ ನಿಂದ ಗ್ರಾಹಕರು ಖರೀದಿ ಮಾಡಬಹುದು.
Buy Link: Click Here
ಇತರೆ ಮಾಹಿತಿಗಳನ್ನು ಓದಿ:
Vivo Y200 Pro 5G: ವಿವೋ ಕಂಪನಿಯ Vivo Y200 Pro ಬಿಡುಗಡೆ