ಎಲ್ಲರಿಗೂ ನಮಸ್ಕಾರ, ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ ಗೆ ಅರ್ಜಿ ಸಲ್ಲಿಸಬೇಕೆ..? ಈ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು..? Reliance Foundation Scholarship ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ದೊರೆಯಲಿದೆ..? ಹಾಗೂ ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ಸಮಾಜದ ಹಿಂದುಳಿದ ವರ್ಗಗಳ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ರಿಲಯನ್ಸ್ ಫೌಂಡೇಶನ್ ವಾರ್ಷಿಕವಾಗಿ 5,100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಗುರಿಯನ್ನು ಹೊಂದಿದೆ. ಮೊದಲ ವರ್ಷದ ಪದವಿ ಹಾಗೂ ಮೊದಲ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಅರ್ಹರು.
Reliance Foundation Scholarship 2024 ಅರ್ಹತೆ:
- ವಿದ್ಯಾರ್ಥಿಯು PUC ಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು ಹಾಗೂ ಪೂರ್ಣ ಅವಧಿಯ ಪದವಿ ಕೊರ್ಸ್ ನಲ್ಲಿ ಅಧ್ಯಯನ ಮಾಡುಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವರ್ಷಕ್ಕೆ 15 ಲಕ್ಷ ಕ್ಕಿಂತ ಕಡಿಮೆ ಇರಬೇಕು (2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ).
- Answer the mandatory Aptitude Test.
- ಇಂಜಿನಿಯರಿಂಗ್, ಟೆಕ್ನಾಲಜಿ, ಎನರ್ಜಿ ಮತ್ತು ಲೈಫ್-ಸೈನ್ಸ್‌ಗಳಲ್ಲಿ ಆಯ್ದ ಕೋರ್ಸ್‌ಗಳಲ್ಲಿ ಪೂರ್ಣ ಅವಧಿಯ ಸ್ನಾತಕೋತ್ತರ ಪದವಿ ಕೊರ್ಸ್ ನ ಮೊದಲ-ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳು ಮಾತ್ರ.
- ಗೇಟ್ ಪರೀಕ್ಷೆಯಲ್ಲಿ 550 ರಿಂದ 1,000 ಅಂಕಗಳನ್ನು ಪಡೆದಿರಬೇಕು.
- Must have scored 7.5 or above in their undergraduate CGPA (or % normalised to CGPA) [If students have not attempted GATE]
- Open for resident Indian citizens
ಪ್ರಯೋಜನಗಳು:
ಪದವಿ ವಿದ್ಯಾರ್ಥಿಗಳಿಗೆ:
ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2 ಲಕ್ಷ ದ ವರೆಗೆ ವಿದ್ಯಾರ್ಥಿವೇತನ ನೀಡುತ್ತಾರೆ.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ:
ಸ್ನಾತಕೋತ್ತರ ಕೊರ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 6 ಲಕ್ಷ ದ ವರೆಗೆ ವಿದ್ಯಾರ್ಥಿವೇತನ ನೀಡುತ್ತಾರೆ.
ಅಗತ್ಯ ದಾಖಲೆಗಳು:
- ಪಾಸ್‌ಪೋರ್ಟ್ ಗಾತ್ರ ಪೋಟೋ
- ವಿಳಾಸ ಪುರಾವೆ
- 10th ಹಾಗೂ 12th ಮಾರ್ಕ್ಸ್ ಕಾರ್ಡ್
- ಪ್ರಸ್ತುತ ಕಾಲೇಜು/ದಾಖಲಾತಿ ಸಂಸ್ಥೆಯ ಬೋನಾಫೈಡ್ ವಿದ್ಯಾರ್ಥಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
- ಗೇಟ್ ಪ್ರವೇಶ ಪರೀಕ್ಷೆಯ ಅಂಕ ಪಟ್ಟಿ (ಅನ್ವಯಿಸಿದರೆ)
- ಪದವಿ ಅಂಕಪಟ್ಟಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-10-2024
ಪ್ರಮುಖ ಲಿಂಕ್‌ಗಳು:
Reliance Foundation Scholarship Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ: