ಎಲ್ಲರಿಗೂ ನಮಸ್ಕಾರ, ನೀವು ಕೊಡ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ..? ಸ್ಯಾಮ್‌ಸಂಗ್ ಕಂಪನಿಯು Samsung Galaxy F55 ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ನಲ್ಲಿ ಕಂಪನಿಯು ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ನೀಡಿದೆ ಎಂಬುದನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
Samsung Galaxy F55 5G ವೈಶಿಷ್ಟ್ಯಗಳು:
Samsung Galaxy F55 5G 120Hz ರಿಫ್ರೆಶ್ ದರದೊಂದಿಗೆ 6.55 ಇಂಚಿನ ಪೂರ್ಣ-HD+ (2,400 x 1,080 ಪಿಕ್ಸೆಲ್‌ಗಳು) ಸೂಪರ್ AMOLED ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ.

ಇದು Qualcomm ನ ಸ್ನಾಪ್‌ಡ್ರಾಗನ್ 7 Gen 1 SoC ಅನ್ನು ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಅನ್ನು ನೀಡಲಾಗಿದೆ. Classy Vegan leather, Saddle stitch pattern ಡಿಸೈನ್ ನೀಡಲಾಗಿದೆ. ಏಪ್ರಿಕಾಟ್ ಕ್ರಷ್ ಮತ್ತು ರೈಸಿನ್ ಬ್ಲ್ಯಾಕ್ ಎರಡು ಆಕರ್ಷಕ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ.
ಕ್ಯಾಮೆರಾ ಮಾಹಿತಿ:
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. 8MP ಹಾಗೂ 2MP ಕ್ಯಾಮೆರಾ ಇದೆ. ಮುಂಭಾಗದಲ್ಲಿ 50 MP ಸೇಲ್ಪಿ ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ಮಾಹಿತಿ:
Samsung Galaxy F55 5G ಯಲ್ಲಿ 5,000mAh ಇರಲಿದೆ. 45W ಪಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ ಸ್ಮಾರ್ಟ್‌ಫೋನ್ ಇದಾಗಿದೆ.

Samsung Galaxy F55 5G ಬೆಲೆ (ಬ್ಯಾಂಕ್ ಆಪರ್ ಬಿಟ್ಟು):
8GB RAM ಹಾಗೂ 128GB Storage ನ ಬೆಲೆ 26,999 ರೂ. ಇರಲಿದೆ.
8GB RAM ಹಾಗೂ 256GB Storage ನ ಬೆಲೆ: 29,999 ರೂ.
12GB RAM ಹಾಗೂ 256GB Storage ನ ಬೆಲೆ: 32,999 ರೂ.
Bank Offer:
ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ EMI ಹಾಗೂ EMI ಅಲ್ಲದ ವಹಿವಾಟುಗಳ ಮೇಲೆ ₹2000 ರಿಯಾಯಿತಿ ಸಿಗಲಿದೆ.
Flipkart ಹಾಗೂ Samsung ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು, ಬ್ಯಾಂಕ್ ಆಪರ್‌ನೊಂದಿಗೆ ಖರೀದಿ ಮಾಡಬಹುದು.
ಇತರೆ ಮಾಹಿತಿಗಳನ್ನು ಓದಿ:
POCO F6 5G: ವಿಭಿನ್ನ ವಿನ್ಯಾಸದೊಂದಿಗೆ ಪೊಕೊ ಹೊಸ ಸ್ಮಾರ್ಟ್ಫೋನ್ ಲಾಂಚ್