Union Budget 2024: ಬಜೆಟ್‌ ಮಂಡನೆ; ಈ ವಸ್ತುಗಳ ದರ ಇಳಿಕೆ, ಯಾವ ವಸ್ತುಗಳ ದರ ಏರಿಕೆಯಾಗಿದೆ ನೋಡಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2024 ರ ಬಜೆಟ್‌ನಲ್ಲಿ (Union Budget 2024) ಯಾವ ವಸ್ತುಗಳು ದರ ಏರಿಕೆಯಾಗಿವೆ ಹಾಗೂ ಯಾವ ವಸ್ತುಗಳ ದರ ಇಳಿಕೆಯಾಗಿವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಕೆಲವು ವಸ್ತುಗಳ ದರದಲ್ಲಿ ಇಳಿಕೆಯಾಗಿದ್ದು ಹಾಗೂ ಇನ್ನು ಕೆಲವು ವಸ್ತುಗಳ ದರ ಏರಿಕೆ ಆಗಿದೆ. ಬಜೆಟ್‌ನಲ್ಲಿ (Union Budget 2024) ಸುಂಕದಲ್ಲಿ ಏರಿಳಿತ ಮಾಡಿದ ಕಾರಣ ಹಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗಲಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6 ರಷ್ಟು ಕಡಿತ ಮಾಡುವುದಾಗಿ ಘೋಷಿಸಲಾಗಿದೆ.

ಸ್ಮಾರ್ಟ್ ಫೋನ್ ಬೆಲೆ ಕೂಡಾ ಸ್ವಲ್ಪ ಕಡಿಮೆ ಆಗಲಿದೆ. ಬಜೆಟ್‌ನಲ್ಲಿ ದರಗಳ ಏರಿಕೆ ವೇಳೆ ಪರಿಸರಕ್ಕೆ ಪೂರಕ ಕ್ರಮಗಳನ್ನೂ ಕೈಗೊಳ್ಳದ್ದು, ಪರಿಸರಕ್ಕೆ ಹಾನಿಯಾಗುವ ಆಗುವ ವಸ್ತುಗಳ ಬೆಲೆ ಏರಿಕೆ ಆಗಿದೆ. ಹಾಗೂ ಪರಿಸರ ಸ್ನೇಹಿ ವಸ್ತುಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

Union Budget 2024: ಈ ಕೆಳಗಿನ ವಸ್ತುಗಳ ದರದಲ್ಲಿ ಇಳಿಕೆ:

  • ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆಯಾಗಿದೆ.
  • ಸ್ಮಾರ್ಟ್ ಫೋನ್ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ
  • ಮೊಬೈಲ್ ಫೋನ್ ಬೆಲೆ ಇಳಿಕೆ
  • ಸ್ಮಾರ್ಟ್ ಫೋನ್ ಚಾರ್ಜರ್ ಬೆಲೆ ಇಳಿಕೆಯಾಗಿದೆ.
  • ಕ್ಯಾನ್ಸರ್ ಔಷಧದ ಬೆಲೆ ಇಳಿಕೆ
  • ಸೋಲಾರ್ ಪ್ಯಾನಲ್‌ಗಳ (ಸೌರ ಫಲಕ) ಬೆಲೆ ಇಳಿಕೆ
  • ವಿದ್ಯುತ್ ತಂತಿ & ಎಕ್ಸ್‌ ರೇ ಉಪಕರಣಗಳ ಬೆಲೆ ಇಳಿಕೆಯಾಗಿದೆ.

ಈ ಕೆಳಗಿನ ವಸ್ತುಗಳ ದರ ಏರಿಕೆ:

  • ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆಯಾಗಿದೆ.
  • ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
  • ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ
  • ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆಯಾಗಿದೆ.

ಪರಿಸರಕ್ಕೆ ಮಾರಕವಾದ, ಮರು ಬಳಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಪರಿಸರ ಸ್ನೇಹಿ ನಿಲುವು ಅನುಸರಿಸಿದೆ.

ಇತರೆ ಮಾಹಿತಿಗಳನ್ನು ಓದಿ:

ಆದಾಯ ತೆರಿಗೆಯಲ್ಲಿ ಬದಲಾವಣೆ; ಮಧ್ಯಮವರ್ಗದವರ ತೆರಿಗೆ ಭಾರ ಇಳಿಕೆ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ

Leave a Comment

error: Content is protected !!