ಭಾರತೀಯ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ T20 ವಿಶ್ವಕಪ್ ಚಾಂಪಿಯನ್‌ಶಿಪ್ ಕಿರೀಟ ತಮ್ಮದಾಗಿಸಿದೆ. ಇದೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ (Virat Kohli Retirement) ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿ ವಿಶ್ವಕಪ್ ಗೆದ್ದು ಭಾರತೀಯರಿಗೆ ಕೊಡುಗೆ ನೀಡದ್ದಾರೆ. 30 ಬಾಲ್ ಗೆ 30 ರನ್ ಬೇಕಿರುವ ಸಂದರ್ಭದಲ್ಲಿ ಇನ್ನೇನು ದಕ್ಷಿಣ ಆಫ್ರಿಕಾ ತಂಡ ಪಂದ್ಯ ಗೆದ್ದೆ ಬಿಟ್ಟಿತು ಎನ್ನುವಾಗ ಹಾರ್ದಿಕ್ ಪಾಂಡ್ಯ ಹೆನ್ರಿಚ್ ಕ್ಲಾಸೆನ್ʼನ ವಿಕೆಟ್ ಕಿತ್ತು ಗೆಲುವಿನ ದಿಕ್ಕನ್ನು ಬದಲಿಸಿದ.
2011 ರ ODI ವಿಶ್ವಕಪ್ ಗೆಲುವಿನ ನಂತರ ಸತತ 13 ವರ್ಷಗಳ ವನವಾಸ ಕಳೆದು ಈ ವಿಶ್ವಕಪ್ ಗೆದ್ದು ಭಾರತ T20 ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. 1983 ವಿಶ್ವಕಪ್, 2007 ರ T20 ವಿಶ್ವಕಪ್ ಮತ್ತು 2011 ರ ODI ವಿಶ್ವಕಪ್ ಗೆದ್ದಿರುವ ಭಾರತ ಇದೀಗ 2024 ರ T20 ವಿಶ್ವಕಪ್ ಗೆದ್ದು 150 ಕೋಟಿ ಭಾರತೀಯರ ಮನಗೆದ್ದಿದ್ದಾರೆ.
Virat Kohli Retirement From T20 Cricket
ಆರಂಭದಲ್ಲಿ ಭಾರತದ ಮೂರು ವಿಕೆಟ್ ಪತನವಾದ ನಂತರ ವಿರಾಟ್ ಕೊಹ್ಲಿ (Virat Kohli) ಬಹಳ ತಾಳ್ಮೆಯ ಆಟವಾಡಿ ತಮ್ಮ ಅನುಭವದಿಂದ ಭಾರತದ ಗೆಲುವಿಗೆ ನೆರವಾದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿ ವಿರಾಟ್ ಕೊಹ್ಲಿ “ಇದು ನನ್ನ ಕೊನೆಯ T20 ವಿಶ್ವಕಪ್, ಇನ್ನೂ ಮುಂದೆ ಯುವ ಕ್ರಿಕೆಟಿಗರು ಆಡಲಿ” ಎಂದು ತಮ್ಮ T20 ಕ್ರಿಕೆಟ್‌ಗೆ ವಿದಾಯದ ಬಗ್ಗೆ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ T20 ಕ್ರಿಕೆಟ್ ಗೆ ಕೊಹ್ಲಿ ನಿವೃತ್ತಿ ಘೋಷಿಸಿ ಮುಂದಿನ ಯುವ ಪೀಳಿಗೆಯ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ:
ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್ ಶುಲ್ಕ ಶೇ.27 ರವರೆಗೆ ಏರಿಕೆ
3 ಲಕ್ಷ ರೂ. ಸಬ್ಸಿಡಿ ಮತ್ತು ಬಡ್ಡಿ ರಹಿತ ಸಾಲ ಸೌಲಭ್ಯ
ಗೃಹಲಕ್ಷ್ಮಿ DBT Status Check ಮಾಡಿ
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ