Vivo V40, Vivo V40 Pro ಬಿಡುಗಡೆ, ಬೆಲೆ ಎಷ್ಟು..? ಯಾವೇಲ್ಲಾ ಹೊಸ ಪೀಚರ್ಸ್ ಇವೆ ನೋಡಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ವಿವೋ ಕಂಪನಿಯು V ಸರಣಿಯ Vivo V40 ಹಾಗೂ Vivo V40 Pro ಎರಡು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಕಂಪನಿಯು ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ನೀಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

Vivo V40 ಮತ್ತು Vivo V40 Pro ವಿಶೇಷತೆಗಳು:

ಎರಡು ಸ್ಮಾರ್ಟ್ ಫೋನ್ ಗಳು 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.78-ಇಂಚಿನ ಪೂರ್ಣ-HD+ (1,260×2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೂ 4,500nits ಗರಿಷ್ಠ ಹೊಳಪನ್ನು ಹೊಂದಿವೆ. Vivo V40 Pro 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. Vivo V40 4nm Qualcomm Snapdragon7 Gen 3 SoC ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ಮಾಹಿತಿ:
ವಿವೋ V40 Pro ಕ್ಯಾಮೆರಾ ಮಾಹಿತಿ:
ಈ ಪೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂಭಾಗದ 50-ಮೆಗಾಪಿಕ್ಸೆಲ್ ಸೋನಿ IMX921 ಪ್ರಾಥಮಿಕ ಕ್ಯಾಮೆರಾ ಇರಲಿದೆ, 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 2x ಆಪ್ಟಿಕಲ್ ಜೂಮ್ ಮತ್ತು 50x ಡಿಜಿಟಲ್ ಜೂಮ್‌ನೊಂದಿಗೆ ಮತ್ತೊಂದು 50-ಮೆಗಾಪಿಕ್ಸೆಲ್ ಸೋನಿ IMX816 ಟೆಲಿಫೋಟೋ ಪೋಟ್ರೇಟ್ ಸಂವೇದಕವನ್ನು ಒಳಗೊಂಡಿದೆ.

ವಿವೋ V40 ಕ್ಯಾಮೆರಾ ಮಾಹಿತಿ:
Vivo V40 ಸರಣಿಯ ಪ್ರಮುಖ ಹೈಲೈಟ್ ಕ್ಯಾಮೆರಾ ಸೆಟಪ್‌. ಇದು Zeiss ಆಪ್ಟಿಕ್ಸ್ ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಪಾವೈಡ್ ಮತ್ತು 50MP ಟೆಲಿಫೋಟೋ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವೀಡಿಯೋ ಕರೆಗಾಗಿ 50MP ಕ್ಯಾಮೆರಾ ಇರಲಿದೆ.

Vivo V40, Vivo V40 Pro

V40 ಬೆಲೆಯ ಮಾಹಿತಿ:

  • 8GB ಹಾಗೂ 128GB ಸ್ಟೋರೇಜ್‌ ನ ಬೆಲೆ: 34,999 ರೂ.
  • 8GB ಹಾಗೂ 256GB ಸ್ಟೋರೇಜ್‌ ನ ಬೆಲೆ: 36,999 ರೂ.
  • 12GB ಹಾಗೂ 512GB ಸ್ಟೋರೇಜ್‌ ನ ಬೆಲೆ: 41,999 ರೂ.

V40 Pro ಬೆಲೆ:

  • 8GB ಹಾಗೂ 256GB ಸ್ಟೋರೇಜ್‌ ನ ಬೆಲೆ: 49,999 ರೂ.
  • 12GB ಹಾಗೂ 512GB ಸ್ಟೋರೇಜ್‌ ನ ಬೆಲೆ: 55,999 ರೂ.

ಬ್ಯಾಟರಿ ಮಾಹಿತಿ:
ಎರಡು ಸ್ಮಾರ್ಟ್ ಫೋನ್ ಗಳು 55,00mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿವೆ. 80W ಪಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಇರಲಿದೆ.

ಬಣ್ಣಗಳ ಮಾಹಿತಿ:

  • V40 ಪೋನ್ 3 ಬಣ್ಣಗಳಲ್ಲಿ ಬಿಡುಗಡೆಯಾಗಿದೆ. Ganges Beidou, Lotus Purple ಹಾಗೂ Titanium Grey ಬಣ್ಣಗಳ ಆಯ್ಕೆ ಇದೆ.
  • V40 Pro ಸ್ಮಾರ್ಟ್ ಫೋನ್ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದೆ. Ganges Beidou ಹಾಗೂ Titanium Grey ಬಣ್ಣಗಳಲ್ಲಿ ಬಿಡುಗಡೆಯಾಗಿದೆ.

ವಿವೋ ಕಂಪನಿಯು ಇಂದು ಅಡ್ವಾನ್ಸ್ ಬುಕ್ಕಿಂಗ್‌ಗೆ ಅವಕಾಶ ನೀಡಿದೆ. V40 Pro ಸ್ಮಾರ್ಟ್ ಫೋನ್ ಆಗಸ್ಟ್ 13 ರಂದು ಮತ್ತು V40 ಫೋನ್ ಆಗಸ್ಟ್ 19 ರಂದು ಖರೀದಿಗೆ ಲಭ್ಯವಿರುತ್ತದೆ. ಗ್ರಾಹಕರು ಈ ಫೋನ್‌ಗಳನ್ನು ಇ-ಕಾಮರ್ಸ್ ವೆಬ್‌ಸೈಟ್ ಪ್ಲಿಪ್‌ಕಾರ್ಟ್ ಮತ್ತು ವಿವೊ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

Poco ಕಂಪನಿಯ M6 Plus 5G ಸ್ಮಾರ್ಟ್ ಫೋನ್ ಬಿಡುಗಡೆ

iQOO Z9 Lite 5G

Realme 13 Pro+ 5G and Realme 13 Pro 5G

Leave a Comment

error: Content is protected !!