Income Tax New Slabs 2024: ಆದಾಯ ತೆರಿಗೆಯಲ್ಲಿ ಬದಲಾವಣೆ; ಮಧ್ಯಮವರ್ಗದವರ ತೆರಿಗೆ ಭಾರ ಇಳಿಕೆ

By: ವಿಜಯಲಕ್ಷ್ಮಿ ಪೂಜಾರಿ

On: Tuesday, July 23, 2024 2:33 PM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಗುಡ್‌ ನ್ಯೂಸ್.‌ ಹೊಸ ತೆರಿಗೆ ಪದ್ಧತಿಯಲ್ಲಿ (Income Tax New Slabs) ಹೊಸ ಬದಲಾವಣೆ. ಅದು ಏನು ಅಂತಿರಾ..? ಹಾಗಿದ್ದರೆ ಈ ಲೇಖನ ನಿಮಗಾಗಿ ಓದಿ.

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಕೇಂದ್ರ ಸರ್ಕಾರವು ಇಂದು 3 ನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸಿದ್ದು, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಸಂಸತ್ ಭವನದಲ್ಲಿ ಏಳನೇ ಬಾರಿ ಬಜೆಟ್‌ (Union Budget 2024) ಮಂಡನೆ ಮಾಡಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರು ರೈತರು, ಮತ್ತು ಯುವಕರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಮಧ್ಯಮವರ್ಗದವರು ತೆರಿಗೆಯಲ್ಲಿ ಏನಾದರು ವಿನಾಯಿತಿ ಸಿಗಬಹುದಾ ಅಂತ ಕಾಯುತ್ತಿದ್ದರು. ಅದರಂತೆ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷ ಆದಾಯವರೆಗೆ ಶೂನ್ಯ ತೆರಿಗೆ ಮೊದಲಿನಂತೆ ಇದ್ದು, 3 ಲಕ್ಷದಿಂದ 6 ಲಕ್ಷವರೆಗೆ ಇದ್ದ ಹೊಸ ಟ್ಯಾಕ್ಸ್ ಸ್ಪ್ಯಾಬ್ (Income Tax New Slab) ಅನ್ನು 3 ಲಕ್ಷದಿಂದ 7 ಲಕ್ಷ ಮಾಡಲಾಗಿದ್ದು, ಇದಕ್ಕೆ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ. 6 ಲಕ್ಷದಿಂದ 9 ಲಕ್ಷವರೆಗೆ ಇದ್ದ ಆದಾಯ ಮೀತಿಯನ್ನು 7 ಲಕ್ಷದಿಂದ 10 ಲಕ್ಷ ರೂ. ಬದಲಾವಣೆ ಮಾಡಿದ್ದು, 10 ಲಕ್ಷವರೆಗಿನ ಆದಾಯಕ್ಕೆ ಶೇ 10ರಷ್ಟು ತೆರಿಗೆ ನಿಗದಿ ಮಾಡಿದ್ದಾರೆ.

ಇನ್ನೂ ಹೊಸ ತೆರಿಗೆ ಪದ್ಧತಿ (New Tax Regime) ಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 50,000 ಸಾವಿರದಿಂದ 75,000 ಸಾವಿರವರೆಗೆ ಹಾಗೂ ಪಿಂಚಣಿದಾರರಿಗೆ 15,000 ರಿಂದ 20,000 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಈ ರೀತಿಯ ಬದಲಾವಣೆ ಮಾಡಿರುವುದರಿಂದ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ವೇತನ ಪಡೆಯುವ ಉದ್ಯೋಗಿಗಳಿಗೆ ಇನ್ಕಮ್ ಟ್ಯಾಕ್ಸ್ (Income tax) ನಲ್ಲಿ 17,500 ರೂ. ವರೆಗೆ ಉಳಿತಾಯ ಆಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Income Tax New Slabs:

  • 3 ಲಕ್ಷದಿಂದ 7 ಲಕ್ಷವರೆಗಿನ ಆದಾಯಕ್ಕೆ ಶೇ 5 ರಷ್ಟು ತೆರಿಗೆ,
  • 7 ಲಕ್ಷದಿಂದ 10 ಲಕ್ಷವರೆಗಿನ ಆದಾಯಕ್ಕೆ ಶೇ 10ರಷ್ಟು,
  • 10 ಲಕ್ಷದಿಂದ 12 ಲಕ್ಷವರೆಗೆ ಶೇ 15ರಷ್ಟು ತೆರಿಗೆ
  • 12 ಲಕ್ಷದಿಂದ 15 ಲಕ್ಷವರೆಗೆ ಶೇ 20ರಷ್ಟು
  • 15 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆಯನ್ನು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ

For Feedback - feedback@example.com

Leave a Comment