Ration Card Amendment 2024: ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶ, ಇಂದೇ ತಿದ್ದುಪಡಿ ಮಾಡಿಸಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Amendment) ಮಾಡಿಸಬೇಕೆ..? ತಿದ್ದುಪಡಿ ಮಾಡಿಸಲು ಇನ್ನು ಎಷ್ಟು ದಿನಗಳ ಕಾಲಾವಕಾಶ ಇದೆ ಎಂದು ಗೊತ್ತಿಲ್ಲವೆ..? ಎಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿದೆ. ತಿದ್ದುಪಡಿ ಮಾಡಿಸಲು ಕೆಲವೇ ದಿನಗಳು ಉಳಿದಿದ್ದು ಬೇಗನೆ ತಿದ್ದುಪಡಿ ಮಾಡಿಸಿಕೊಳ್ಳಿ.

ಎಲ್ಲಾ ಜಿಲ್ಲೆಯವರಿಗೆ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಆಹಾರ ಇಲಾಖೆ ಅವಕಾಶ ನೀಡಿದೆ. ಸರ್ವರ್ ಓಪನ್ ಇದ್ದು, ಯಾರು ರೇಷನ್ ಕಾರ್ಡ್ ನಲ್ಲಿ ತಿದ್ದಪಡಿ ಮಾಡಿಸಬೇಕು ಎಂದು ಕಾಯುತ್ತಿರುವವರು ಅಂತವರು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಆಹಾರ ಇಲಾಖೆಯು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಆಗಸ್ಟ್‌ 10 ರವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರೊಳಗಾಗಿ ತಿದ್ದುಪಡಿ ಮಾಡಬಯಸುವವರು ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಈ ಕೇಳಗಿನ ತಿದ್ದುಪಡಿ ಮತ್ತು ಬದಲಾವಣೆ ಮಾಡಬಹುದು:

  • ಕುಟುಂಬ ಸದಸ್ಯರ ಹೆಸರು ತಿದ್ದುಪಡಿ
  • ಯಜಮಾನರ ಬದಲಾವಣೆ
  • ಹೆಸರು ಸೇರ್ಪಡೆ
  • ವಿಳಾಸ ಬದಲಾವಣೆ
  • ಹೆಸರು ತೆಗೆಯುವುದು
  • ಇ-ಕೆವೈಸಿ ಅಪ್ಡೇಟ್‌ ಹಾಗೂ ಇತರೆ ಸೇವೆಗಳು

Ration Card Amendment ಎಲ್ಲಿ ಮಾಡಿಸುವುದು:

ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಬಯಸುವವರು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಸಬಹುದು. ಖಾಸಗಿ ಸೈಬ‌ರ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ಇರುವುದಿಲ್ಲ.

ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಮಾತ್ರವೇ ಅವಕಾಶ ನೀಡಿದ್ದು. ಹೊಸ ರೇಷನ್‌ ಕಾರ್ಡ್‌ ಅರ್ಜಿಗೆ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇತರೆ ಮಾಹಿತಿಗಳನ್ನು ಓದಿ:

ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ

ಉಚಿತ ಬೋರ್‌ವೇಲ್: ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಆಹ್ವಾನ

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

Leave a Comment

error: Content is protected !!