ಹೈನುಗಾರಿಕೆಗಾಗಿ ರಾಜ್ಯ ಸರ್ಕಾರದಿಂದ ಸಹಾಯಧನ | Dairy Farming Subsidy Scheme 2024 Karnataka

By: ವಿಜಯಲಕ್ಷ್ಮಿ ಪೂಜಾರಿ

On: Sunday, July 21, 2024 2:26 PM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಹಸು-ಎಮ್ಮೆ ಖರೀದಿಸಲು ಸಹಾಯಧನ (Dairy Farming Subsidy) ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಾಲು ಉತ್ಪಾದಕರ ಉತ್ತೇಜನ ಉಳಿಕೆ ಅನುದಾನದಡಿ ರೈತ ಮಹಿಳೆಯರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Dairy Farming Subsidy Scheme Karnataka:

ರೈತ ಮಹಿಳೆಯರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಒಂದು ಹಸು-ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ಶೇ 6 ರ ಬಡ್ಡಿ ದರದಲ್ಲಿ ಸಹಾಯಧನ ನೀಡುತ್ತಾರೆ. ಅರ್ಹ ಮಹಿಳೆಯರು ಇದರ ಲಾಭ ಪಡೆದುಕೊಳ್ಳಬಹುದು.

ಅರ್ಹರು ತಮ್ಮ ವ್ಯಾಪ್ತಿಯ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರ ಬ್ಯಾಂಕ್‌ಗಳಿಂದ ಹೈನುಗಾರಿಕೆಗೆ ಸಾಲ (Dairy Farming Subsidy) ಪಡೆದುಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿರಬೇಕು.

ಜಿಲ್ಲೆಗೆ ಒಟ್ಟು ಪರಿಶಿಷ್ಟ ಜಾತಿ ವರ್ಗದವರಿಗೆ 16, ಪರಿಶಿಷ್ಟ ಪಂಗಡ ವರ್ಗದ 6 ಹಾಗೂ ಸಾಮಾನ್ಯ ವರ್ಗದವರಿಗೆ 65 ಒಟ್ಟು 87 ಮಹಿಳಿಯರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ಪ್ರತಿ ಫಲಾನುಭವಿಗಳಿಗೆ 65,000 ರೂ. ಸಾಲದ ಮೊತ್ತಕ್ಕೆ ಶೇ.6 ಬಡ್ಡಿ ದರದಲ್ಲಿ ಸಹಾಯಧನ ನೀಡುತ್ತಾರೆ.

ಆಯ್ಕೆಯಾದ ಫಲಾನುಭವಿಗಳಿಂದ ಮುಂಗಡ ಹಣದ ಸ್ವೀಕೃತಿ ರಶೀದಿ ಪಡೆದು ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.

2024 ರ ಏಪ್ರಿಲ್ 1 ರಿಂದ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಅರ್ಹ ರೈತ ಮಹಿಳೆಯರು ಸಂಬಂಧ ಪಟ್ಟ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಪಶುವೈದ್ಯ ಸಂಸ್ಥೆಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಹೊಸ BPL ರೇಷನ್ ಕಾರ್ಡ್

ಬೆಳೆ ಪರಿಹಾರ: ರೈತರ ಬ್ಯಾಂಕ್ ಖಾತೆಗಳಿಗೆ 3000 ರೂ. ಜಮಾ

ಗೃಹಲಕ್ಷ್ಮೀ ಯೋಜನೆ

For Feedback - feedback@example.com

Leave a Comment