ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ | Govt Subsidy Scheme For Goat Farming Karnataka 2024

By: ವಿಜಯಲಕ್ಷ್ಮಿ ಪೂಜಾರಿ

On: Thursday, July 18, 2024 12:09 PM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕುರಿ-ಮೇಕೆ ಸಾಕಾಣಿಕೆಗಾರರಿಗೆ ಗುಡ್ ನ್ಯೂಸ್. ನೀವು ಕೂಡ ಕುರಿ ಅಥವಾ ಮೇಕೆಗಳನ್ನು ಖರೀದಿಸಲು ಸರ್ಕಾರದಿಂದ ಸಹಾಯ ಧನ (Govt Subsidy Scheme) ಪಡೆಯಬೇಕೆ..? ಹಾಗಿದ್ದರೆ ಇಲ್ಲಿದೆ ಮಾಹಿತಿ ಓದಿರಿ.

ಕುರಿ-ಮೇಕೆ ಸಾಕಾಣಿಕೆಗಾರರು ಸರ್ಕಾರದಿಂದ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ. ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ-ಮೇಕೆ ಸಾಕಾಣಿಕೆಗೆ ಅರ್ಜಿ ಕರೆಯಲಾಗಿದೆ. ಅರ್ಹ ಮತ್ತು ಆಸಕ್ತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

2024-25 ನೇ ಸಾಲಿನ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲಿ 20+1 ಕುರಿ-ಮೇಕೆ ಘಟಕಗಳ ಸ್ಥಾಪನೆಗೆ ತಲಾ 1.75 ಲಕ್ಷ ಆರ್ಥಿಕ ನೇರವು ನೀಡಲಾಗಿದೆ.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ನೊಂದಾಯಿಸಿಕೊಂಡವರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಚಿತ್ರದುರ್ಗ ಜಿಲ್ಲೆಗೆ ಒಟ್ಟು 706 ಘಟಕಗಳನ್ನು ನೀಡಲು ಗುರಿ ಹೊಂದಲಾಗಿದೆ. ಪ್ರತಿ ಘಟಕ್ಕೆ 1,75,000 ರೂ. ವೆಚ್ಚ ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರದಿಂದ 43,750 ರೂ. ಸಹಾಯ ಧನ (Govt Subsidy Scheme) ನೀಡಲಾಗುತ್ತದೆ. 43,750 ರೂ. ಅನ್ನು ಫಲಾನುಭವಿಗಳು ವಂತಿಕೆ ನೀಡಬೇಕು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 87,500 ರೂ. ಕ್ಕೆ ಶೇ.9.26ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಫಲಾನುಭವಿಗಳು 20+1 ಕುರಿ-ಮೇಕೆಗಳನ್ನು ಖರೀದಿಸಿ ಸ್ವಂತವಾಗಿ ಸಾಕಾಣಿಕೆ ಮಾಡಬಹುದಾಗಿದೆ.

Govt Subsidy Scheme ಅರ್ಜಿ ಸಲ್ಲಿಸುವ ವಿಧಾನ:

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಅರ್ಜಿಗಳು ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯನ್ನು
ಅಗತ್ಯ ದಾಖಲೆಗಳೊಂದಿಗೆ ಸಹಕಾರಿ ಸಂಘ ಅಥವಾ ಚಿತ್ರದುರ್ಗ ಪಶು ಆಸ್ಪತ್ರೆ ಆವರಣದಲ್ಲಿರುವ ನಿಗಮದ ಸಹಾಯಕ ನಿರ್ದೇಶಕ ಕಚೇರಿಗೆ ಜುಲೈ 31 ರ ಸಂಜೆ 5:30 ಒಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08194-222718, ಮೊಬೈಲ್ ಸಂಖ್ಯೆ 9448656231ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಹೊಸ BPL ರೇಷನ್ ಕಾರ್ಡ್

ಬೆಳೆ ಪರಿಹಾರ: ರೈತರ ಬ್ಯಾಂಕ್ ಖಾತೆಗಳಿಗೆ 3000 ರೂ. ಜಮಾ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಗೃಹಲಕ್ಷ್ಮೀ ಯೋಜನೆ

For Feedback - feedback@example.com

Leave a Comment