NREGA Job Card Karnataka: ಜಾಬ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

By: ವಿಜಯಲಕ್ಷ್ಮಿ ಪೂಜಾರಿ

On: Thursday, July 18, 2024 2:08 PM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ, ಜಾಬ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್. ನರೇಗಾ ಜಾಬ್ ಕಾರ್ಡ್ (Job Card Karnataka) ಅನ್ನು ನೀವು ಪಡೆದುಕೊಂಡಿದ್ದರೆ ಯಾವೇಲ್ಲಾ ಸೌಲಭ್ಯಗಳು ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ನರೇಗಾ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸಕ್ಕಾಗಿ ಪ್ರತಿದಿನ ವೇತನವನ್ನು ನೀಡಲಾಗುತ್ತದೆ, ಯಾರು ಜಾಬ್ ಕಾರ್ಡ್ ಹೊಂದಿರುತ್ತಾರೆ ಅಂತವರಿಗೆ ಮಾತ್ರ ಕೆಲಸವನ್ನು ನೀಡಲಾಗುತ್ತದೆ. ಫಲಾನುಭವಿಗಳಿಗೆ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ಅನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನರೇಗಾ ಜಾಬ್ ಕಾರ್ಡ್ ಹೊಂದಿರಬೇಕಾಗುತ್ತದೆ. ನರೇಗಾ ಜಾಬ್ ಕಾರ್ಡ್ ಗಳ ಮೂಲಕ ಕಾರ್ಮಿಕರಿಗೆ 1 ವರ್ಷದಲ್ಲಿ 100 ದಿನಗಳ ಖಾತರಿ ಉದ್ಯೋಗವನ್ನು ನೀಡಲಾಗುತ್ತದೆ.

ಆರ್ಥಿಕವಾಗಿ ದುರ್ಬಲವಾಗಿರುವ ಬಡ ಕುಟುಂಬಗಳಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಜಾಬ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಅರ್ಹರು ನರೇಗಾ ಜಾಬ್ ಕಾರ್ಡ್ ನ ಲಾಭವನ್ನು ಪಡೆದುಕೊಳ್ಳಬಹುದು.

NREGA Job Card Karnataka ಪ್ರಯೋಜನಗಳು:

  • ಜಾಬ್ ಕಾರ್ಡ್ ಹೊಂದಿದವರಿಗೆ 1 ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತದೆ.
  • 100 ದಿನಗಳ ಉದ್ಯೋಗ ಸಿಗದಿದ್ದರೆ, ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
  • ಉದ್ಯೋಗದೊಂದಿಗೆ, ಇತರೆ ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ನೀಡಲಾಗುವುದು.
  • ನರೇಗಾ ಜಾಬ್ ಕಾರ್ಡ್ ಹೊಂದಿರುವವರಿಗೆ ಆರೋಗ್ಯ ವಿಮೆಯನ್ನು ಸಹ ನೀಡಲಾಗುವುದು.
  • ಪಿಎಂ ಆವಾಸ್ ಯೋಜನೆಯ ಪ್ರಯೋಜನವನ್ನು ನೀಡಲಾಗುವುದು.
  • ಮತ್ತು ಇತರೆ ಯೋಜನೆಗಳ ಸೌಲಭ್ಯ ದೊರೆಯುತ್ತವೆ

ಅರ್ಹತೆಗಳು:
ನರೇಗಾ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಜಾಬ್ ಕಾರ್ಡ್ ಪಡೆಯಬಯಸುವವರ ಮನೆಯಲ್ಲಿ ಸರ್ಕಾರಿ ಉದ್ಯೋಗದಲ್ಲಿರಬಾರದು.

NREGA Job Card Karnataka ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ್
  2. ರೇಷನ್ ಕಾರ್ಡ್
  3. ಗುರುತಿನ ಚೀಟಿ
  4. ಆದಾಯ ಪ್ರಮಾಣ ಪತ್ರ
  5. ಜಾತಿ ಪ್ರಮಾಣ ಪತ್ರ
  6. ನಿವಾಸ ಪ್ರಮಾಣಪತ್ರ
  7. ಮೊಬೈಲ್ ನಂಬರ್
  8. ಬ್ಯಾಂಕ್ ಪಾಸ್ ಬುಕ್
  9. ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಹೊಸ BPL ರೇಷನ್ ಕಾರ್ಡ್

ಬೆಳೆ ಪರಿಹಾರ: ರೈತರ ಬ್ಯಾಂಕ್ ಖಾತೆಗಳಿಗೆ 3000 ರೂ. ಜಮಾ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಗೃಹಲಕ್ಷ್ಮೀ ಯೋಜನೆ

For Feedback - feedback@example.com

Leave a Comment