Gold Rate: ಚಿನ್ನದ ಬೆಲೆ ಭಾರಿ ಕುಸಿತ; ಕೇಂದ್ರ ಬಜೆಟ್ ಬೆನ್ನಲ್ಲೇ ಒಂದೇ ದಿನ 3,000 ರೂ. ಇಳಿಕೆ

By: ವಿಜಯಲಕ್ಷ್ಮಿ ಪೂಜಾರಿ

On: Wednesday, July 24, 2024 1:48 PM

Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್. ಚಿನ್ನದ ಬೆಲೆ (Gold Rate) ಒಂದೇ ದಿನ ಭಾರಿ ಕುಸಿತ. ನಿನ್ನ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ ತೆರಿಗೆಯನ್ನು ಕಡಿಮೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಬಂಗಾರದ ಬೆಲೆ ಭಾರಿ ಇಳಿಕೆಯಾಗಿದೆ.

ಸತತವಾಗಿ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯಾಗಿದ್ದು, ಚಿನ್ನ ಕೊಳ್ಳುವ ಗ್ರಾಹಕರಿಗೆ ಸಂತೋಷವನ್ನುಂಟುಮಾಡಿದೆ. ನೀವೆನಾದರು ಬಹುದಿನಗಳಿಂದ ಚಿನ್ನ ಖರೀದಿಸಲು ಕಾಯುತ್ತಿದ್ದರೆ ಇದೆ ಸುವರ್ಣವಕಾಶ.

ನಿನ್ನೆ ಬಜೆಟ್ ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕ ಶೇ 6 ರಷ್ಟು ಕಡಿತಗೊಳಿಸಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 3,000 ರೂ. ಇಳಿಕೆ ಕಂಡಿದ್ದು, ಇದು ಒಂದೇ ದಿನ ಭಾರಿ ಕುಸಿತ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು..? 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.

2024 ರ ಜುಲೈ 23 ರಂದು ಬಂಗಾರದ ಬೆಲೆಯು 22 ಕ್ಯಾರೆಟ್ 10 ಗ್ರಾಂಗೆ 2750 ರೂ. ಇಳಿಕೆ ಆಗಿದ್ದು, 24 ಕ್ಯಾರೆಟ್ 10 ಗ್ರಾಂಗೆ 2990 ರೂ. ಕುಸಿತ ಕಂಡಿದೆ. 18 ಕ್ಯಾರೆಟ್ 10 ಗ್ರಾಂಗೆ 2050 ರೂ. ಕಡಿಮೆ ಆಗಿದೆ.

Today Gold Rate: ಚಿನ್ನದ ಬೆಲೆ ಭಾರಿ ಇಳಿಕೆ:

  • 22 ಕ್ಯಾರೆಟ್ ಚಿನ್ನ: ಪ್ರತಿ 10 ಗ್ರಾಂಗೆ 64,950 ರೂ.
  • 24 ಕ್ಯಾರೆಟ್ ಚಿನ್ನ (999 ಚಿನ್ನ): ಪ್ರತಿ 10 ಗ್ರಾಂಗೆ 70,860 ರೂ.
  • 18 ಕ್ಯಾರೆಟ್ ಚಿನ್ನ: ಪ್ರತಿ 10 ಗ್ರಾಂಗೆ 53,140 ರೂ.

ಚಿನ್ನದ ಬೆಲೆಯಲ್ಲಿ (Gold Rate) ಭಾರಿ ಕುಸಿತ ಕಂಡು ಬಂದಿದ್ದು, ಒಂದು ವಾರದಲ್ಲಿ 22 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆಯು ₹3800 ರೂ. ರಷ್ಟು ಇಳಿಕೆ ಆಗಿದ್ದು, 24 ಕ್ಯಾರೆಟ್‌ 10 ಗ್ರಾಂನ ಚಿನ್ನದ ಬೆಲೆಯು ₹4140 ರೂ. ಕಡಿಮೆಯಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ 2024

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ

For Feedback - feedback@example.com

Leave a Comment