ವಿದ್ಯಾಸಿರಿ ವಿದ್ಯಾರ್ಥಿವೇತನ 2025; ಅರ್ಜಿ ಸಲ್ಲಿಸಿ | SSP Scholarship 2025 For Post Matric Students Apply Online @ssp.postmatric.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸರ್ಕಾರವು ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ಯಾರು ಅರ್ಜಿ ಸಲ್ಲಿಸಬಹುದು..? SSP Scholarship 2025 ಅರ್ಜಿ ಸಲ್ಲಿಕೆ ದಿನಾಂಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26 ನೇ ಸಾಲಿನ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮೆಟ್ರಿಕ್-ನಂತರದ ಕೋರ್ಸುಗಳಾದ 12th ಮತ್ತು ಸಮನಾಂತರ ಕೊರ್ಸ್, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ (Vidyasiri Scholarship) ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Vidyasiri Scholarship ಅಗತ್ಯ ದಾಖಲೆಗಳು:

  1. ಆಧಾರ್ ನಂಬರ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ಹೆಸರು
  2. ಮೊಬೈಲ್ ನಂಬರ್
  3. ಇ-ಮೇಲ್ ಐಡಿ
  4. 10 ನೇ ತರಗತಿ ನೋಂದಣಿ ಸಂಖ್ಯೆ
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆ‌ರ್.ಡಿ ಸಂಖ್ಯೆ
  6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ
  7. ವಿದ್ಯಾರ್ಥಿಯು ವಾಸವಿರುವ ಜಿಲ್ಲೆಯ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
  8. ಕಾಲೇಜು ದಾಖಲಾತಿ/ ನೋಂದಣಿ ಸಂಖ್ಯೆ
  9. ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ)
  10. ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-09-2025

SSP Scholarship 2025 ಪ್ರಮುಖ ಲಿಂಕ್ ಗಳು:

ವಿದ್ಯಾರ್ಥಿಗಳು ssp.postmatric.karnataka.gov.in ವೆಬ್ ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

  • ಅರ್ಜಿ ಸಲ್ಲಿಸುವ ಲಿಂಕ್: Apply ಮಾಡಿ
  • ಅಧಿಕೃತ ವೆಬ್ ಸೈಟ್: ssp.postmatric.karnataka.gov.in, bcwd.karnataka.gov.in
  • ಇ-ಮೇಲ್ ಐಡಿ: postmatrichelp@karnataka.gov.in
  • ಇಲಾಖೆಯ ಸಹಾಯ ವಾಣಿ: 8050770005
  • ದೂರವಾಣಿ ಸಂಖ್ಯೆ: 1902

HDFC Scholarship 2025 Apply

SSP ವಿದ್ಯಾರ್ಥಿವೇತನ 2025

Leave a Comment