ಗೃಹ ಜ್ಯೋತಿ ಫ‌ಲಾನುಭವಿಗಳಿಗೆ ಗುಡ್‌ ನ್ಯೂಸ್;‌ ಸರ್ಕಾರದಿಂದ ಹೊಸ ಅಪ್ಡೇಟ್‌ | Gruha Jyothi Delink Aadhaar Online 2024 @ sevasindhu.karnataka.gov.in/GruhaJyothi_Delink

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? ಹಾಗಿದ್ದರೇ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಸರ್ಕಾರದಿಂದ ಬಂದಿದೆ ಹೊಸ ಅಪ್ಡೇಟ್‌, (Gruha Jyothi Delink) ಅದು ಏನೂ ಅಂತೀರಾ..? ಈ ಲೇಖನ ಓದಿ.

ರಾಜ್ಯದಲ್ಲಿ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಗೃಹ ಜ್ಯೋತಿ ಯೋಜನೆಯು ರಾಜ್ಯದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಗೃಹ ಜ್ಯೋತಿ ಯೋಜನೆಯು ಜಾರಿಯಾಗಿ ಇದೀಗ ಒಂದು ವರ್ಷ ಪೂರೈಸಿದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಾಡಿಗೆದಾರರಿಗೆ ಗುಡ್ ನ್ಯೂಸ್. ಈಗಾಗಲೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯುತ್ತಿರುವ ಬಾಡಿಗೆದಾರರು ಮನೆ ಬದಲಿಸಿದ್ದರೆ ಮತ್ತೆ ಹೇಗೆ ಗೃಹ ಜ್ಯೋತಿ ಯೋಜನೆ ಲಾಭ ಪಡೆದುಕೊಲಕ್ಳಬೇಕು ಎಂದು ಚಿಂತಿಸುತ್ತಿರುವವರಿಗೆ ಸರ್ಕಾರ ಹೊಸ ಅಪ್ಡೇಟ್‌ ನೀಡಿದೆ.

ಬಾಡಿಗೆದಾರರು ಮನೆ ಬದಲಾಯಿಸಿದಾಗ ಹಳೇ ಮನೆಯ ಆರ್‌.ಆರ್‌. ಸಂಖ್ಯೆಯೊಂದಿಗೆ ಜೋಡಣೆಯಾದ ಆಧಾರ್‌ ನಂಬರ್‌ ಕಡಿತಗೊಳಿಸಿ, ಮತ್ತೆ ಹೊಸದಾಗಿ ಲಿಂಕ್‌ ಮಾಡಿಕೊಳ್ಳಬಹುದು. ಆಗ, ಬೇರೆ ಬಾಡಿಗೆ ಮನೆಗೆ ಹೋದ ನಂತರವೂ ನೀವು ಈ ಹಿಂದೆ ಬಳಸುತ್ತಿದ್ದ ಸರಾಸರಿಯಷ್ಟೇ ವಿದ್ಯುತ್‌ ಬಳಸಲು ಗ್ರಾಹಕರಿಗೆ ಅನುಕೂಲ ಆಗಲಿದೆ.

ಈ ಹಿಂದೆ ಡಿ-ಲಿಂಕ್‌ಗೆ (Gruha Jyothi Delink Aadhaar) ಅವಕಾಶ ಇರಲಿಲ್ಲ. ಬಾಡಿಗೆದಾರರು ಮನೆ ಬದಲಾಯಿಸಿದರೆ ತಮ್ಮ ಮನೆಯ ಬೇರೆ ಸದಸ್ಯರ ಆಧಾರ್‌ ಲಿಂಕ್‌ ಮಾಡಬೇಕಾಗಿತ್ತು. ಇದೀಗ ಇಂಧನ ಇಲಾಖೆಯು ಈಗ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಟ್ಟಿದೆ.

ಗೃಹ ಜ್ಯೋತಿ ಯೋಜನೆಯ ಬಳಕೆಯ ಮಾಹಿತಿ:

  • ರಾಜ್ಯದಲ್ಲಿ 1.67 ಕೋಟಿ ಒಟ್ಟು ಗೃಹಜ್ಯೋತಿ ಅಡಿ ನೋಂದಣಿ ಮಾಡಿಕೊಂಡವರು.
  • 1.56 ಕೋಟಿ ಒಟ್ಟಾರೆ ಯೋಜನೆಯ ಲಾಭ ಪಡೆದುಕೊಂಡ ಫ‌ಲಾನುಭವಿಗಳು.
  • 8,239 ಕೋಟಿ ರೂ. ಬಿಡುಗಡೆಯಾದ ಸಹಾಯಧನ.

ಈ ಯೋಜನೆಯಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್‌ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್‌ ಫೀಸ್‌, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.

ನಾವು ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜನರು ಡಿ-ಲಿಂಕ್‌ ಸೌಲಭ್ಯ ಬೇಕೆಂದು ಕೋರಿದ್ದರು. ಈಗ ಸಾಫ್ಟ್‌ವೇರ್ ನಲ್ಲಿ ಬದಲಾವಣೆ ಮಾಡಿ ಈ ಸೌಲಭ್ಯವನ್ನು ಜನರಿಗೆ ನೀಡಿದ್ದೇವೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

Gruha Jyothi Delink ಮಾಡುವುದು ಹೇಗೆ?:

ಸೇವಾ ಸಿಂಧು ಪೋರ್ಟಲ್‌ನ https://sevasindhu.karnataka.gov.in/GruhaJyothi_Delink/GetAadhaarData.aspx ಆ‌ರ್.ಆ‌ರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡಬಹುದು. ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.

Gruha Jyothi Delink Online Link:
ಡಿ-ಲಿಂಕ್‌ ಮಾಡುವ ಲಿಂಕ್:‌ Delink Online

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

Gruhalakshmi DBT Status Check

ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ

Leave a Comment

error: Content is protected !!