ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET 2024) ಯ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ (KSET Application 2024) ಆಹ್ವಾನಿಸಲಾಗಿದೆ.
ಕೆಸೆಟ್-2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ. ಅಭ್ಯರ್ಥಿಗಳು ಕೆಸೆಟ್-2024 ಕ್ಕೆ “Online” ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
ಕೆ-ಸೆಟ್ ಪರೀಕ್ಷೆಗಾಗಿ 22-07-2024 ರಿಂದ 22-08-2024 ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಸಲು 26-08-2024 ಕೊನೆ ದಿನವಾಗಿರುತ್ತದೆ. 24-11-2024 ರಂದು ಲಿಖಿತ ಪರೀಕ್ಷೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಕೆ-ಸೆಟ್ ಪರೀಕ್ಷೆಯನ್ನು ಒಟ್ಟು 41 ವಿಷಯಗಳಲ್ಲಿ ನಡೆಸಲಾಗುತ್ತದೆ.
ಪರೀಕ್ಷಾ ಶುಲ್ಕ:
GM, II-A, II-B, III-A, III-B ಹಾಗೂ ಇತರೆ ರಾಜ್ಯದ ವಿದ್ಯಾರ್ಥಿಗಳಿಗೆ ಅಭ್ಯರ್ಥಿಗಳಿಗೆ: 1,000 ರೂ.
ಪ್ರವರ್ಗ-I, SC, ST, PWD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: 700 ರೂ.
ಶುಲ್ಕ ಪಾವತಿಸುವ ವಿಧಾನ:
ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಶುಲ್ಕ ವಿನಾಯಿತಿಯನ್ನು ಪ್ರವರ್ಗ- I, SC, ST, ತೃತೀಯ ಲಿಂಗ ಮತ್ತು ವಿಕಲಚೇತನರ (Medical Certificate with 40% or more disability ಹೊಂದಿರಬೇಕು) ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
KSET Application 2024 ಪ್ರಮುಖ ದಿನಾಂಕಗಳು:
- ಅಧಿಸೂಚನೆ ಹೊರಡಿಸಲಾಗುವ ದಿನಾಂಕ: 13-07-2024
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 29-07-2024
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 22-08-2024
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 26-08-2024
- ಪರೀಕ್ಷಾ ದಿನಾಂಕ: 24-11-2024
KSET Notification 2024 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ (Update Soon)
ಅಧಿಕೃತ ವೆಬ್ ಸೈಟ್: kea.kar.nic.in
ಇತರೆ ಮಾಹಿತಿಗಳನ್ನು ಓದಿ: