ಮೀನುಗಾರಿಕೆ ಇಲಾಖೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ | Matsya Vahini Scheme 2024 Karnataka Application

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವೆನಾದರು ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. Matsya Vahini Scheme 2024 ಯೋಜನೆಯ ಅಡಿಯಲ್ಲಿ ಯಾವೇಲ್ಲಾ ಸೌಲಭ್ಯಗಳು ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಯಾದಗಿರಿ ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಹಾಗೂ ಮತ್ಸ್ಯವಾಹಿನಿ ಯೋಜನೆಯಡಿ ಸಹಾಯಧನ ಮತ್ತು ರಾಜ್ಯವಲಯ ಯೋಜನೆ ಕಾರ್ಯಕ್ರಮದಡಿ ಮೀನುಗಾರರಿಗೆ ಉಚಿತವಾಗಿ ಸಲಕರಣೆ ಕಿಟ್ಟುಗಳನ್ನು ವಿತರಿಸಲು ಆನ್‌ಲೈನ್ ನಲ್ಲಿ ಅರ್ಜಿಗಳನ್ನು ಅಹ್ವಾನಿಸಿದ್ದಾರೆ.

Matsya Vahini Scheme 2024:

ಈ ಯೋಜನೆಯ ಅಡಿಯಲ್ಲಿ ಮೀನುಗಾರರಿಗೆ ಮೀನುಮರಿ ಖರೀದಿಗೆ ಸಹಾಯಧನ, ಕೆರೆ/ಜಲಾಶಯಗಳ ಅಂಚಿನಲ್ಲಿ ನಿರ್ಮಿಸಿರುವ ಮೀನುಮರಿ ಪಾಲನಾಕೊಳಗಳಲ್ಲಿ ಮೀನುಮರಿ ಪಾಲನೆ ಮಾಡಲು ಸಹಾಯಧನಕ್ಕಾಗಿ ಅರ್ಹ ಹಾಗೂ ಆಸಕ್ತ ಮೀನುಗಾರರ ಸಹಕಾರ ಸಂಘ/ರೈತ ಮೀನುಗಾರರ ಉತ್ಪಾದಕ ಸಂಸ್ಥೆ/ಮೀನುಕೃಷಿಕರು/ಮೀನುಗಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಸ್ವಯಂ ದೃಢೀಕರಿಸಿದ ಪಾಸ್ ಪೋರ್ಟ ಅಳತೆಯ ಭಾವಚಿತ್ರ
  • ಮೀನುಗಾರಿಕೆ ಚಟುವಟಿಕೆ ಕುರಿತಾದ ದೃಢೀಕರಣ ಪತ್ರ ಅಥವಾ ದಾಖಲೆ
  • ಮತ್ಸ್ಯವಾಹಿನಿ ಯೋಜನೆಗೆ ವಾಹನ ಖರೀದಿಯ ಮೂಲ ಬಿಲ್ಲು

Matsya Vahini Scheme 2024 ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 18-07-2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 17-08-2024

ಪ್ರಮುಖ ಲಿಂಕ್ ಗಳು:
ಪ್ರಕಟಣೆ: ಡೌನ್‌ಲೋಡ್
ಆನ್‌ಲೈನ್‌ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್:‌ yadgir.nic.in, zpyadgiri.karnataka.gov.in

ಸದರಿ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-08- 2024 ಇದ್ದು ಸಹಾಯಧನ ಪಡೆಯಲು ಅರ್ಹ ಆಸಕ್ತ ಮೀನುಗಾರರ ಸಹಕಾರ ಸಂಘ/ರೈತ ಮೀನುಗಾರರ ಉತ್ಪಾದಕ ಸಂಸ್ಥೆ/ಮೀನುಕೃಷಿಕರು/ಮೀನುಗಾರರಿಗೆ ಅರ್ಜಿಗಳನ್ನು ಫಲಾನುಭವಿಗಳು ಸಂಬಂದಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಕಛೇರಿ ವೇಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಈ ಮೂಲಕ ತಿಳಿಯಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕಛೇರಿಗಳಿಗೆ, ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು.

  • ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ ಯಾದಗಿರಿ ಮೊದಲನೇ ಮಹಡಿ ಕೋಣೆ ಸಂಖ್ಯೆ:ಸಿ-15, ಜಿಲ್ಲಾಡಳಿತ ಭವನ ಯಾದಗಿರಿ.
  • ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ಯಾದಗಿರಿ ಮೊದಲನೇ ಮಹಡಿ ಕೋಣೆ ಸಂಖ್ಯೆ:ಸಿ-14, ಜಿಲ್ಲಾಡಳಿತ ಭವನ ಯಾದಗಿರಿ.
  • ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ಲಕ್ಷ್ಮೀನಗರ ಶಹಾಪೂರ.
  • ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿ ತಹಸೀಲ್ ರೋಡ ಲಕ್ಷ್ಮೀಗುಡಿ ಹತ್ತಿರ ಸುರಪೂರ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ

Leave a Comment

error: Content is protected !!