ಎಲ್ಲರಿಗೂ ನಮಸ್ಕಾರ, ಪಡಿತರ ಚೀಟಿಯನ್ನು ಬಡವರಿಗೆ ಸರ್ಕಾರವು ನೀಡುತ್ತದೆ. ಇಂತಹ ಗ್ರಾಹಕರ ರೇಷನ್ ಕಾರ್ಡ್ ರದ್ದಾಗಲಿದೆ. ಯಾರ ರೇಷನ್ ಕಾರ್ಡ್ ರದ್ದಾಗಬಹುದು ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.
ಸರ್ಕಾರವು ನೀಡುವ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮ್ಮ ಬಳಿ ರೇಷನ್ ಕಾರ್ಡ್ ಇರಬೇಕು. ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲು ಸರಕಾರ ತಿರ್ಮಾನಿಸಿದೆ.
ಅನರ್ಹವಾದ ಬಿಪಿಎಲ್ ಕಾರ್ಡ್‌ಗಳನ್ನು ರದ್ದತಿ ಪಡಿಸಲು ಸರಕಾರ ನಿರ್ಧರಿಸಿದೆ, ರದ್ದಾದ ಬದಲಿಗೆ BPL ಕಾರ್ಡ್ ಗಾಗಿ ಕಾಯುತ್ತಿರುವ ಹೊಸ ಅರ್ಜಿದಾರರಿಗೆ ಅವಕಾಶ ನೀಡಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರಕಾರವು ನಿಗದಿಪಡಿಸಿರುವ BPL ಕುಟುಂಬಗಳು 1.03 ಕೋಟಿ ಹಾಗೂ ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದರೆ ರಾಜ್ಯದಲ್ಲಿ ಹೆಚ್ಚುವರಿಯಾಗಿ 10.33 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಅವುಗಳಿಗೆ ಸರಕಾರವೇ ಸ್ವಂತ ಖರ್ಚಿನಿಂದ ಪಡಿತರ ಪೂರೈಸುತ್ತಿದೆ. ಲಕ್ಷಾಂತರ ಹೊಸ ರೇಷನ್ ಕಾರ್ಡ್ ಅರ್ಜಿ ಬಾಕಿ ಇವೆ.
ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದವರ ಕಾರ್ಡ್ ರದ್ದಾಗಲಿದೆ. ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುಗಳನ್ನೂ ತೆಗೆದಹಾಕಿಲ್ಲ. ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕಿದರೆ ಆಗ ಯೂನಿಟ್‌ಗಳು ಕಡಿಮೆಯಾದರೆ ಹೊರೆ ಕಡಿಮೆಯಾಗಲಿದೆ.
ಬಿಪಿಎಲ್ ಕಾರ್ಡ್‌ದಾರರ ಪೈಕಿ ಪ್ರತಿ ತಿಂಗಳು ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಪಡೆಯುತ್ತಿದ್ದಾರೆ. ಇನ್ನುಳಿದವರು ಹಲವು ತಿಂಗಳುಗಳಿಂದ ಪಡೆದುಕೊಳ್ಳುತ್ತಿಲ್ಲ. ಸತತವಾಗಿ ಯಾರು ಮೂರು ತಿಂಗಳಿಂದ ಪಡಿತರ ತೆಗೆದುಕೊಂಡಿರುವುದಿಲ್ಲ ಅಂತವರ ಕಾರ್ಡ್‌ಗಳನ್ನು ಅಮಾನತುಗೊಳಿಸುವುದು, ಸತತ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದಿದ್ದರೆ ಅಂತವರ ಕಾರ್ಡ್ ಅನ್ನು ಸಂಪೂರ್ಣ ರದ್ದುಗೊಳಿಸಬಹುದು.
ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಯಾರಿಗೂ ರೇಷನ್ ಕಾರ್ಡ್ ವಿತರಿಸಿಲ್ಲ. ಸದ್ಯಕ್ಕೆ ಯಾವುದೇ ಹೊಸ ಪಡಿತರ ಚೀಟಿಯನ್ನು ಇಲಾಖೆಯು ವಿತರಿಸುವುದಿಲ್ಲ.