ಎಲ್ಲರಿಗೂ ನಮಸ್ಕಾರ, ಚಿನ್ನ ಖರೀದಿಸಲು ಕಾಯುತ್ತಿರುವವರಿಗೆ ಸಿಹಿ ಸುದ್ದಿ. ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟು (Today Gold Rate) ಎಂದು ತಿಳಿದುಕೊಳ್ಳಬೇಕೆ..? ಹಾಗಿದ್ದರೇ ಈ ಲೇಖನ ನಿಮಗಾಗಿ.
ಸತತ ನಾಲ್ಕೈದು ದಿನಗಳಿಂದ ಬಂಗಾರದ ಬೆಲೆ ಇಳಿಕೆಯಾಗಿದ್ದು, ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಗೆ ಎಷ್ಟು ಇಳಿಕೆ ಕಂಡಿದೆ ಎಂದು ಈ ಕೇಳಗಿನಂತೆ ತಿಳಿಸಿದ್ದೇವೆ.
ಜುಲೈ 26 ರಂದು ಚಿನ್ನದ ಬೆಲೆಯು 22 ಕ್ಯಾರೆಟ್ 10 ಗ್ರಾಂಗೆ 1,000 ರೂ. ಕಡಿಮೆ ಆಗಿದ್ದು, 24 ಕ್ಯಾರೆಟ್ 10 ಗ್ರಾಂಗೆ 1090 ರೂ. ಕುಸಿತ ಕಂಡಿದೆ. 18 ಕ್ಯಾರೆಟ್ 10 ಗ್ರಾಂಗೆ 820 ರೂ. ಇಳಿಕೆ ಆಗಿದೆ.
Today Gold Rate 26-07-2024:
- 22 ಕ್ಯಾರೆಟ್ ಚಿನ್ನ: ₹ 63,000 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 68,730 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 51,550 ಪ್ರತಿ 10 ಗ್ರಾಂ
ಚಿನ್ನದ ಬೆಲೆಯಲ್ಲಿ (Gold Rate) ಸತತ ಇಳಿಕೆ ಕಂಡು ಬರುತ್ತಿದ್ದು, ಒಂದು ವಾರದಲ್ಲಿ 22 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಲೆಯು ₹5750 ರೂ. ರಷ್ಟು ಇಳಿಕೆ ಆಗಿದ್ದು, 24 ಕ್ಯಾರೆಟ್ 10 ಗ್ರಾಂನ ಚಿನ್ನದ ಬೆಲೆಯು ₹6,270 ರೂ. ಕುಸಿತ ಕಂಡಿದೆ.
ಇತರೆ ಮಾಹಿತಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ