ಎಲ್ಲರಿಗೂ ನಮಸ್ಕಾರ, ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್. ರೈತರು ಬೆಳೆದಿರುವ ಬೆಳೆಗಳು ಅತಿವೃಷ್ಠಿ ಅನಾವೃಷ್ಠಿ ಕಾರಣದಿಂದ ಸರಿಯಾಗಿ ಬರದಿದ್ದರೆ ಅಂತಹ ಸಂದರ್ಭದಲ್ಲಿ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬೆಳೆ ಪರಿಹಾರದ (Bara Parihara) ಮೊತ್ತವು ನೇರವಾಗುತ್ತದೆ.
ರೈತರ ಜೀವನೋಪಾಯ ನಷ್ಟ ಭರಿಸಲು ರೈತರಿಗೆ ತಲಾ 3,000 ರೂ. ಪರಿಹಾರ ವಿತರಣೆ ಮಾಡಲಾಗುವುದು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಗಾಲದ ಕಾರಣ ಸಣ್ಣ, ಅತಿ ಸಣ್ಣ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು 18 ಲಕ್ಷ ರೈತರಿಗೆ ತಲಾ 3,000 ರೂ. ಪರಿಹಾರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
40 ಲಕ್ಷ ರೈತರಿಗೆ ರಾಜ್ಯ ಸರ್ಕಾರವು ಎಸ್ ಡಿಆರ್ ಎಫ್ ನಿಧಿಯಲ್ಲಿ 2,451 ಕೋಟಿ ರೂಪಾಯಿಗಳ ಬರ ಪರಿಹಾರ (Bara Parihara) ನೀಡಿದೆ. ಮುಂಬರುವ ಒಂದು ವಾರದೊಳಗಾಗಿ ರೈತರಿಗೆ ಖಾತೆಗಳಿಗೆ 3,000 ರೂ. ಬರಗಾಲ ಪರಿಹಾರ ಹಣವನ್ನು ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ:
ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ
ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ