ಎಲ್ಲರಿಗೂ ನಮಸ್ಕಾರ, ಸುರಕ್ಷಿತಯ ಹಿತದೃಷ್ಟಿಯಿಂದ HSRP Number Plate ಅಳವಡಿಕೆಯು ಅವಶ್ಯಕವಾಗಿದೆ. ನಿಮ್ಮ ವಾಹನಗಳಿಗೆ ಇನ್ನು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲವೇ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿರಿ.
ಹೌದು ಇದುವರೆಗೂ ಯಾರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲವೊ ಅವರಿಗೆ ಇನ್ನೂ ಕಾಲಾವಕಾಶವಿದೆ. ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳಕಡಿಕೆಗೆ ಸಾರಿಗೆ ಇಲಾಖೆಯು ಸೂಚಿಸಲಾಗಿದೆ.
HSRP Number Plate: ಜೂನ್ 12 ರವರೆಗೆ ಕಾಲಾವಕಾಶ:
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆಯು ನೀಡಿದ ಗಡುವು ಹೈಕೋರ್ಟ್ ಆದೇಶದ ಅನ್ವಯ ಜೂನ್ 12 ರವರೆಗೆ ಕಾಲಾವಕಾಶ ನೀಡಲಾಗಿದೆ. ಜೂನ್ 12 ರ ನಂತರ HSRP ಪ್ಲೇಟ್ ಅಳವಡಿಕೆ ಮಾಡದ ವಾಹನಗಳಿಗೆ ದಂಡ ಬೀಳಲಿದೆ. ನಿಮ್ಮ ಬಳಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಿಗೆ HSRP ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸುವುದು ಕಡ್ಡಾಯವಾಗಿದೆ.
2019ರ ಏಪ್ರಿಲ್ 1 ಕ್ಕಿಂತ ಹಿಂದಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 45 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, 1.55 ಕೋಟಿ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲ.
ದಂಡ ಗ್ಯಾರಂಟಿ:
ಸಾರಿಗೆ ಇಲಾಖೆಯ ಆದೇಶದನ್ವಯ ಜೂನ್ 12ರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಯಾರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿರುವುದಿಲ್ಲವೊ ಅಂತವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ನಂತರ ಪ್ರತಿಬಾರಿ 1 ಸಾವಿರ ದಂಡ ವಿಧಿಸಲು ಸಾರಿಗೆ ಇಲಾಖೆಯು ನಿರ್ಧರಿಸಿದೆ.
HSRP Number Plate Online Registration:
ಸಾರಿಗೆ ಇಲಾಖೆಯ http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮೀ ಯೋಜನೆ DBT Status Check ಮಾಡಿ
ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಬಂದಿಲ್ಲವೇ..? ಸರ್ಕಾರದಿಂದ ಹೊಸ ಅಪಡೇಟ್
ರೇಷನ್ ಕಾರ್ಡ್ Status Check ಮಾಡಿ