ಎಲ್ಲರಿಗೂ ನಮಸ್ಕಾರ, ಪೊಕೊ ಕಂಪನಿಯು POCO F6 5G ಅನ್ನು ಲಾಂಚ್ ಮಾಡಿದೆ ಇಂದಿನಿಂದ ಸೇಲ್ ಪ್ರಾರಂಭವಾಗುತ್ತದೆ. POCO F6 5G ತನ್ನ ಹಿಂದಿನ ಮಾದರಿಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಫೋನ್ ಹಿಂಭಾಗವು ಫ್ಲಾಟ್ ಆಗಿದೆ ಮತ್ತು ಡ್ಯುವೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಫೋನ್ ಲಘು ಮತ್ತು ತೆಳುವಾಗಿದೆ ಮತ್ತು ಒಂದೇ ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾಗಿದೆ. ಫೋನ್ನ ಫ್ರೇಮ್ ಪ್ಲಾಸ್ಟಿಕ್ ಆಗಿದೆ, ಆದರೆ ಹಿಂಭಾಗ ಗಾಜಿನಿಂದ ಮಾಡಲ್ಪಟ್ಟಿದೆ. Poco F6 5G 160.00 x 74.40 x 7.80mm (ಎತ್ತರ x ಅಗಲ x ದಪ್ಪ) ಮತ್ತು 179.00 ಗ್ರಾಂ ತೂಕವನ್ನು ಹೊಂದಿದೆ.
POCO F6 5G ವಿಶೇಷತೆಗಳು:
Poco F6 5G ಭಾರತದಲ್ಲಿ ಹೊಸ Snapdragon 8s Gen 3 SoC ಹೊಂದಿದ ಮೊದಲ ಫೋನ್ ಆಗಿ ಬಿಡುಗಡೆಯಾಗಿದೆ. ಫೋನ್ 6.67-ಇಂಚಿನ 1.5K AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಹಾಗೂ ಆಂಡ್ರಾಯ್ಡ್ 14 ಅನ್ನು ಹೊಂದಿದೆ.

ಕ್ಯಾಮೆರಾ ಮಾಹಿತಿ:
ಪೊಕೊ ಸ್ಮಾರ್ಟ್ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 50-ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಕ್ಯಾಮೆರಾ ಇದೆ. ಮತ್ತು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 20MP ಸೇಲ್ಪಿ ಕ್ಯಾಮೆರಾ ಇರಲಿದೆ.
ಬ್ಯಾಟರಿ ಹಾಗೂ ಬಣ್ಣಗಳ ಮಾಹಿತಿ:
ಈ ಮೊಬೈಲ್ ನಲ್ಲಿ ಕಂಪನಿಯು 5,000mAh ಬ್ಯಾಟರಿ ನೀಡಿದೆ. 90W Turbo ಪಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಕಪ್ಪು ಮತ್ತು ಟೈಟಾನಿಯಂ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP64 ರೇಟಿಂಗ್ ಅನ್ನು ಹೊಂದಿದೆ.

ಸಂಗ್ರಹಣೆ ಮತ್ತು ಬೆಲೆ:
8 GB RAM ಹಾಗೂ 256 GB Storage ನ ಬೆಲೆ : 29,999 ರೂ.
12 GB RAM ಹಾಗೂ 256 GB Storage ನ ಬೆಲೆ: 31,999 ರೂ.
12 GB RAM ಹಾಗೂ 512 GB Storage ನ ಬೆಲೆ: 33,999 ರೂ.
ಬ್ಯಾಂಕ್ offers:
ICICI Bank, HDFC BANK ಹಾಗೂ SBI Debit/Credit Card ನಿಂದ ಖರೀದಿ ಮಾಡಿದರೆ 2000 ರೂ. ರಿಯಾಯಿತಿ ಇರುತ್ತದೆ. ಈ ಸ್ಮಾರ್ಟ್ಫೋನ್ Flipkart ನಲ್ಲಿ ಹಾಗೂ POCO ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.
ಇತರೆ ಮಾಹಿತಿಗಳನ್ನು ಓದಿ:
Vivo X Fold 3 Pro: ಜೂನ್ 6 ರಂದು ವಿವೋ X ಫೋಲ್ಡ್ 3 ಪ್ರೋ ಭಾರತದಲ್ಲಿ ಬಿಡುಗಡೆ
1 thought on “POCO F6 5G: ವಿಭಿನ್ನ ವಿನ್ಯಾಸದೊಂದಿಗೆ ಪೊಕೊ ಹೊಸ ಸ್ಮಾರ್ಟ್ಫೋನ್ ಲಾಂಚ್, ಇಂದಿನಿಂದ ಸೇಲ್ ಶುರು”