Poco M6 Plus 5G: Poco ಕಂಪನಿಯ M6 Plus 5G ಸ್ಮಾರ್ಟ್ ಫೋನ್ ಬಿಡುಗಡೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, Poco M6 Plus 5G ಸ್ಮಾರ್ಟ್ ಫೋನ್ ಅನ್ನು ಆಗಸ್ಟ್ 1 ರಂದು ಲಾಂಚ್ ಮಾಡಲಾಗಿದೆ. ಈ ಪೋನ್ ನ ಬೆಲೆ ಹಾಗೂ ಬ್ಯಾಟರಿ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

Poco M6 Plus 5G ಸ್ಮಾರ್ಟ್ ಫೋನ್ ವಿಶೇಷತೆಗಳು:

Poco M6 Plus 5G ಆಕ್ಟಾ-ಕೋರ್ Qualcomm Snapdragon 4 Gen 2 AE ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. 120 Hz ರಿಫ್ರೆಶ್ ರೇಟ್ 6.79-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080×2400 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ನೀಡುತ್ತದೆ. ಈ ಪೋನ್ ನ ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಇರಲಿದೆ.

ಕ್ಯಾಮೆರಾ ಮಾಹಿತಿ:
ಕ್ಯಾಮೆರಾಗಳ ಬಗ್ಗೆ ಹೇಳುವುದಾದರೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ ಮುಂಭಾಗದ 13-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ ಮಾಹಿತಿ:
Poco M6 Plus 5G ಸ್ಮಾರ್ಟ್ ಫೋನ್ ನಲ್ಲಿ‌ ಕಂಪನಿಯು 5030mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಬ್ಯಾಟರಿಯನ್ನಯ ಚಾರ್ಜಿ ಮಾಡಲು 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ.

ಬಣ್ಣಗಳ ಮಾಹಿತಿ:
ಈ ಪೋನ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಾಂಚ್ ಆಗಿದ್ದು, ಗ್ರಾಹಕರು ತಮಗೆ ಇಷ್ಟವಾದ ಬಣ್ಣದ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಗ್ರ್ಯಾಫೈಟ್ ಬ್ಲಾಕ್ (Graphite Black), ಐಸ್ ಸಿಲ್ವರ್ (Ice Silver) ಹಾಗೂ ಮಿಸ್ಟಿ ಲ್ಯಾವೆಂಡರ್ (Misty Lavender) ಬಣ್ಣಗಳಲ್ಲಿ ಬಿಡುಗಡೆಯಾಗಿದೆ.

ಬೆಲೆ ಹಾಗೂ Storage ಮಾಹಿತಿ:
6GB RAM ಹಾಗೂ 128GB Storage ನ ಬೆಲೆ: 13,499 ರೂ.
8GB RAM ಹಾಗೂ 128GB Storage ನ ಬೆಲೆ: 14,499 ರೂ.

ಆಗಸ್ಟ್ 1 ರಂದು Flipkart ನಲ್ಲಿ ಮೊದಲ ಸೇಲ್‌ ಶುರುವಾಗಲಿದೆ.

ಇತರೆ ಮಾಹಿತಿಗಳನ್ನು ಓದಿ:

Vivo V40, Vivo V40 Pro ಬಿಡುಗಡೆ

iQOO Z9 Lite 5G

Realme 13 Pro+ 5G and Realme 13 Pro 5G

ಗೃಹಲಕ್ಷ್ಮೀ ಯೋಜನೆ

Leave a Comment

error: Content is protected !!