Labour Card Karnataka 2024: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸಿಗುತ್ತವೆ ಈ ಸೌಲಭ್ಯಗಳು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾ..? ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಹಲವಾರು ಸೌಲಭ್ಯವನ್ನು ನೀಡುತ್ತಿದೆ. Labour Card Karnataka ಮೂಲಕ ಈ ಸೌಲಭ್ಯಗಳ ಲಾಭ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಲಿದ್ದೇವೆ ಓದಿರಿ.

ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿರುತ್ತದೆ. ಈ ಯೋಜನೆಯ ಲಾಭ ಪಡೆಯಲು ನೋಂದಣಿ ಕಡ್ಡಾಯವಾಗಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕಾಗಿ ಕಾರ್ಮಿಕರು ಕಡ್ಡಾಯವಾಗಿ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು ಹಲವಾರು ಸೌಲಭ್ಯವನ್ನು ನೀಡುತ್ತಿದೆ. ಅರ್ಹ ಕಟ್ಟಡ ಕಾರ್ಮಿಕರು ಕೇಳಕಂಡ ಯೋಜನೆಗಳ ಸೌಲಭ್ಯ ಪಡೆಯಬಹುದು.

Labour Card Karnataka ಸೌಲಭ್ಯ:

  • ಶೈಕ್ಷಣಿಕ ಸಹಾಯಧನ
  • ವೈದ್ಯಕೀಯ ಸಹಾಯಧನ
  • ಪಿಂಚಣಿ ಸೌಲಭ್ಯ
  • ಕುಟುಂಬ ಪಿಂಚಣಿ ಸೌಲಭ್ಯ
  • ಟೂಲ್ ಕಿಟ್ ಸೌಲಭ್ಯ
  • ದುರ್ಬಲತೆ ಪಿಂಚಣಿ
  • ಹೆರಿಗೆ ಸೌಲಭ್ಯ
  • ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹರಾಶಿ ಸಹಾಯಧನ
  • ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
  • ಅಪಘಾತ ಪರಿಹಾರಧನ
  • ತಾಯಿ ಮಗು ಸಹಾಯ ಹಸ್ತ
  • ಮದುವೆ ಸಹಾಯಧನ

Labour Card Karnataka ಅರ್ಹತೆ:

ಫಲಾನುಭವಿಯು ನೋಂದಣಿ ಪೂರ್ವದಲ್ಲಿ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

Labour Card Karnataka ದಾಖಲೆಗಳು:

  • 90 ದಿನಗಳ ಉದ್ಯೋಗ ದೃಢೀಕರಣ ಪತ್ರ ಹೊಂದಿರಬೇಕು.
  • ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ,
  • ಬ್ಯಾಂಕ್ ಪಾಸ್ ಬುಕ್
  • ಅರ್ಜಿದಾರರ ಆಧಾರ್ ಕಾರ್ಡ್‌’ಗೆ ಲಿಂಕ್ ಇರುವ ಮೊಬೈಲ್ ನಂಬರ್.

ಇತರೆ ಮಾಹಿತಿಗಳನ್ನು ಓದಿ:

Karnataka Labour Card Scholarship 2024

ಗೃಹಲಕ್ಷ್ಮೀ ಯೋಜನೆ DBT Status Check ಮಾಡಿ

ಪೋಸ್ಟ್ ಆಫೀಸ್ ನಲ್ಲಿ ಎಫ್‌ಡಿ ಮಾಡಿ, ದುಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ

ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ, ಹೀಗೆ ಅರ್ಜಿ ಸಲ್ಲಿಸಿ

Leave a Comment

error: Content is protected !!