ಎಲ್ಲರಿಗೂ ನಮಸ್ಕಾರ, ಕಿಸಾನ್ ಸಮ್ಮಾನ ನಿಧಿಯ ಯೋಜನೆಯ 17 ನೇ ಕಂತಿನ (PM Kisan 17th Installment Payment Status) ಹಣವು ನಿಮ್ಮ ಖಾತೆಗೆ ಬಂದಿದೆಯಾ ಎಂಬುದನ್ನು ಚೆಕ್ ಮಾಡಬೇಕಾ..? ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಓದಿರಿ.
PM ಕಿಸಾನ್ ಸಮ್ಮಾನ ನಿಧಿ ಯೋಜನೆಯ 17 ನೇ ಕಂತಿನ ಹಣವನ್ನು ಸಣ್ಣ ಹೀಡುವಳಿದಾರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. PM Kisan eKYC ಮಾಡಿಸಿಕೊಂಡಿರುವ ಅರ್ಹ ಫಲಾನುಭವಿ ರೈತರ ಖಾತೆಗಳಿಗೆ ಈ ಯೋಜನೆಯ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ 17 ನೇ ಕಂತಿನ ಹಣವು 18-06-2024 ರಂದು ರೈತರ ಖಾತೆಗಳಿಗೆ ಜಮಾ ಆಗಲಿದೆ. ನಿಮ್ಮ, ಖಾತೆಗೆ ಹಣ ಜಮಾ ಆಗಿದೆಯಾ ಎಂಬುದನ್ನು ಈ ಕೆಳಗೆ ತಿಳಿಸಿರುವ ವಿಧಾನಗಳ ಮೂಲಕ ಚೆಕ್ ಮಾಡಿಕೊಳ್ಳಬಹುದು.
PM Kisan 17th Installment Beneficiary List 2024 ಚೆಕ್ ಮಾಡುವುದು ಹೇಗೆ?
PM ಕಿಸಾನ್ ಯೋಜನೆಯ Payment Status ಚೆಕ್ ಮಾಡುವ ಸರಳ ವಿಧಾನವನ್ನು ಈ ಕೇಳಗಿನಂತೆ ನೀಡಲಾಗಿದೆ. ಈ ಮಾಹಿತಿಯನ್ನು ಪಡೆದು Payment Status ನೋಡಿ.
PM Kisan Status ಮೊದಲ ವಿಧಾನ:
ಈ ವಿಧಾನದ ಮೂಲಕ ನಿಮ್ಮ ಊರಿನಲ್ಲಿ ಯಾವ ರೈತರಿಗೆ PM Kisan Samman Nidhi 17 ನೇ ಕಂತಿನ ಹಣವು ಬೀಡುಗಡೆಯಾಗಿದೆ ಎಂಬುದನ್ನು ಈ ಸರಳ ವಿಧಾನದ ಮೂಲಕ ತಿಳಿದುಕೊಳ್ಳಿ.
- Step-1: ಮೊದಲಿಗೆ ಈ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ವೆಬ್‌ಸೈಟ್ ಓಪನ್ ಮಾಡಿ Scroll ಮಾಡಿ, ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. BENIFICIARY LIST ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

- Step-3: BENIFICIARY LIST ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, Block ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿ. Get Report ಮೇಲೆ ಕ್ಲಿಕ್ ಮಾಡಿ.

- Step-4: ಆಗ ಅಲ್ಲಿಯೇ ಕೇಳಗೆ ನಿಮ್ಮ ಊರಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ಅರ್ಹ ಫಲಾನುಭವಿ ರೈತರ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ನೋಡಬಹುದು.

PM Kisan Payment Status Karnataka ಚೆಕ್ ಮಾಡುವ ವಿಧಾನ:
- Step-1: ಮೊದಲಿಗೆ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. Know Your Status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

- Step-3: ಮುಂದಿನ ಪುಟದಲ್ಲಿ “Enter Registration No.” ಎಂದಿರುತ್ತದೆ, ಅಲ್ಲಿ ನಿಮ್ಮ PM Kisan Number ಎಂಟರ್ ಮಾಡಿ. ಅಲ್ಲಿಯೇ ಕೇಳಗೆ ನೀಡಿರುವ ಆರು ಅಕ್ಷರಗಳ ಕ್ಯಾಪ್ಚಾ ಭರ್ತಿ ಮಾಡಿ. Get Data ಮೇಲೆ ಕ್ಲಿಕ್ ಮಾಡಿ.

- Step-4: ಆಗ ನಿಮ್ಮ ಮುಂದೆ ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ PM Kisan ಖಾತೆಯ ಮಾಹಿತಿ ಲಭ್ಯವಾಗುತ್ತದೆ. ಈ ಕೇಳಗಿನಂತೆ ವಯಕ್ತಿಕ ಮಾಹಿತಿ ಲಭಿಸುತ್ತದೆ.

- Step-5: ನೀವು ಅರ್ಹರಿದ್ದರೆ ಈ ಕೇಳಗಿನಂತೆ Land Seeding :- Yes, Aadhaar Bank Account Seeding Status:- Yes, e-KYC Status :- Yes ಎಂದಿರುತ್ತದೆ. ಇಲ್ಲವಾದರೆ No ಎಂದಿರುತ್ತದೆ. ಆಗಿದ್ದಾಗ ನೀವು Seeding ಮಾಡಿಸಬೇಕಾಗುತ್ತದೆ.

- Step-6: LATEST INSTALLMENTS DETAILS ಎಂದಿರುತ್ತದೆ. ಅದರಲ್ಲಿ ನಿಮ್ಮ ಖಾತೆಗೆ ಹಣ ಜಮಾ ಮಾಡಿರುವ ಮಾಹಿತಿಯನ್ನು ನೀಡಲಾಗಿತ್ತದೆ. ಜಮಾ ಆಗಿರುವ ಬ್ಯಾಂಕ್ ಖಾತೆ, ಬ್ಯಾಂಕ್ ಹೆಸರು, Payment Mode ಸೇರಿದಂತೆ PM Kisan Karnataka Payment Status ನ ಎಲ್ಲ ಮಾಹಿತಿ ಅಲ್ಲಿರುತ್ತದೆ.

ಪ್ರಮುಖ ಲಿಂಕ್‌ಗಳು:
PM Kisan Payment Status ಅಧಿಕೃತ ಲಿಂಕ್: ಚೆಕ್ ಮಾಡಿ
ಅಧಿಕೃತ ವೆಬ್‌ಸೈಟ್: pmkisan.gov.in
ಕೊನೆಯ ಮಾತು: PM Kisan Payment Status Karnataka ಚೆಕ್ ಮಾಡುವ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.
ಇತರೆ ಮಾಹಿತಿಗಳನ್ನು ಓದಿ:
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ